Wednesday, August 10, 2022

Latest Posts

ಮಕ್ಕಳ ‘ಜೈಕೋವ್-ಡಿ’ ಕೊರೋನಾ ಲಸಿಕೆ ಬೆಲೆ ಅಂತಿಮಗೊಳಿಸಿದ ಕೇಂದ್ರ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಮಕ್ಕಳಿಗೆ ನೀಡುವ ಮೊದಲ ಕೋವಿಡ್ ಲಸಿಕೆ  ಅಹಮದಾಬಾದ್‌ನ ಜೈಡಸ್ ಕ್ಯಾಡಿಲಾ ಕಂಪನಿಯ ‘ಜೈಕೋವ್ ಡಿ’ಯ ಬೆಲೆಯನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದೆ.

ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಈ ಕುರಿತು ಮಾತನಾಡಿದ್ದು, ‘ಜೈಕೋವ್-ಡಿ’ ಲಸಿಕೆಯ ಬೆಲೆಯನ್ನು ಅಂತಿಮಗೊಳಿಸಲಾಗಿದೆ. ಭಾರತದ ಡ್ರಗ್ ಕಂಟ್ರೋಲರ್ ಜನರಲ್‌ನಿಂದ ತುರ್ತು ಬಳಕೆಯ ಅನುಮತಿಯನ್ನು ಪಡೆದ ಬಳಿಕ ತಯಾರಕರು ತಕ್ಷಣವೇ ಲಸಿಕೆಯ ಉತ್ಪಾದನೆ ಆರಂಭಿಸಿದ್ದಾರೆ” ಎಂದು ತಿಳಿಸಿದ್ದಾರೆ.

‘ಜೈಕೋವ್ ಡಿ’ ಲಸಿಕೆಯು ತಯಾರಕರು ಬೇಡಿಕೆ ಇಟ್ಟಿದ್ದಕ್ಕಿಂತ ಕಡಿಮೆ ಬೆಲೆಯಲ್ಲಿದೆ. ಆದರೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್‌ಗೆ ಸರ್ಕಾರವು ಪಾವತಿಸುವುದಕ್ಕಿಂತ ಹೆಚ್ಚು ದರ ಎನ್ನಲಾಗಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರ ಈ ಬಗ್ಗೆ ಮಾಹಿತಿ ನೀಡಲಿದೆ.

12 ರಿಂದ‌ 18 ವರ್ಷದ ಮಕ್ಕಳಿಗೆ ಈ ಲಸಿಕೆ ನೀಡಬಹುದಾಗಿದ್ದು, ಮಕ್ಕಳಿಗೆ 3 ಡೋಸ್​​ ನೀಡಬೇಕಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss