ಪಂಜಾಬ್ ಸಿಎಂ ಭಗವಂತ್ ಮನೆಗೆ ‘ಝಡ್-ಪ್ಲಸ್’ ಭದ್ರತೆ ನೀಡಿದ ಕೇಂದ್ರ ಸರ್ಕಾರ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ದೇಶ ಮತ್ತು ವಿದೇಶಗಳಿಂದ ಬರುವ ಸಂಭಾವ್ಯ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಅವರಿಗೆ ‘ಝಡ್-ಪ್ಲಸ್’ ವರ್ಗದ ಸಶಸ್ತ್ರ ಭದ್ರತೆ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೇಂದ್ರ ಮೀಸಲು ಪೊಲೀಸ್ ಪಡೆ ವಿಐಪಿ ರಕ್ಷಣಾ ತಂಡ ರಕ್ಷಣೆ ಒದಗಿಸಲಿದೆ. ಉನ್ನತ ವರ್ಗದ ‘ಝಡ್-ಪ್ಲಸ್’ ರಕ್ಷಣೆಯನ್ನ ಭಾರತದಾದ್ಯಂತ ಮನ್ ಅವರಿಗೆ ಒದಗಿಸಲಾಗುವುದು ಮತ್ತು ಗೃಹ ಸಚಿವಾಲಯ ಇತ್ತೀಚೆಗೆ ಇದಕ್ಕೆ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಶೀಘ್ರ ಈ ಕಾರ್ಯ ವಹಿಸಿಕೊಳ್ಳಲಿದ್ದು , ಇದಕ್ಕಾಗಿ 55 ಸಶಸ್ತ್ರ ಸಿಬ್ಬಂದಿಯ ತಂಡವನ್ನ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!