ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೇಂದ್ರ ಸರ್ಕಾರ ರೆಮ್ಡೆಸಿವಿರ್ ಇಂಜೆಕ್ಷನ್ ಮತ್ತು ರೆಮ್ಡಿಸಿವಿರ್ ಆಯಕ್ಟಿವ್ ಫಾರ್ಮಾಸಿಟಿಕಲ್ ಇನ್ಗ್ರಿಡಿಯೆಂಟ್ಸ್ನ್ನು ವಿದೇಶಗಳಿಗೆ ರಫ್ತು ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಈ ಕುರಿತು ಭಾನುವಾರ ಪ್ರಕಟಣೆ ಹೊರಡಿಸಿರುವ ಕೇಂದ್ರ, ದೇಶದಲ್ಲಿ ಕೊರೋನಾ ಸೋಂಕು ಹಿಡಿತಕ್ಕೆ ಬರುವವರೆಗೂ ಜಾರಿಯಲ್ಲಿರಲಿದೆ ಎಂದು ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ರೆಮ್ಡೆಸಿವಿರ್ ಲಸಿಕೆ ತಯಾರಿಸುವ ಎಲ್ಲಾ ಸ್ವದೇಶಿ ತಯಾರಕರು ಔಷಧಿಯ ಪೂರಕ ಬಳಕೆಗಾಗಿ ತಮ್ಮ ವೆಬ್ಸೈಟ್ಗಳಲ್ಲಿ ಸಂಗ್ರಹಕಾರರು ಮತ್ತು ಹಂಚಿಕೆದಾರರ ವರದಿಯನ್ನು ಪ್ರದರ್ಶಿಸುವಂತೆ ಹೇಳಿದ್ದಾರೆ. ಡ್ರಗ್ ಇನ್ಸ್ಪೆಕ್ಟರ್ಗಳು ಮತ್ತು ಇತರೆ ಅಧಿಕಾರಿಗಳು ಔಷಧಿಯ ಸಂಗ್ರಹ ಮತ್ತು ಕಾಳಸಂತೆಯಲ್ಲಿ ಮಾರಾಟವಾಗದಂತೆ ಎಚ್ಚರಿಕೆ ವಹಿಸಬೇಕೆಂದು ನಿರ್ದೇಶನ ನೀಡಿದೆ.
ದೇಶದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಹೆಚ್ಚಿದಂತೆಲ್ಲ ರೆಮ್ಡಿಸಿವಿರ್ ಬೇಡಿಕೆಯೂ ಹೆಚ್ಚತೊಡಗಿದೆ. ಕೆಲವೆಡೆ ಅಭಾವ ಉಂಟಾಗಿದ್ದಾರೆ, ಕೆಲವು ಕಡೆಗಳಲ್ಲಿ ಔಷಧವು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿದ್ದವು.