spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯುವಜನತೆಗೆ ಉದ್ಯೋಗವಕಾಶ ದೊರಕಿಸಲು ಮುಂದಾದ ಕೇಂದ್ರ ಸರಕಾರ

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸದಿಲ್ಲಿ: ಮುಂದಿನ ಐದು ವರ್ಷಗಳಲ್ಲಿ ಸುಮಾರು 7 ಲಕ್ಷ ಯುವಜನರಿಗೆ ಉದ್ಯೋಗವಕಾಶ ದೊರಕಿಸಲು ಕೇಂದ್ರ ಸರಕಾರ ಮುಂದಾಗಿದೆ. ಔದ್ಯಮಿಕ ವಲಯಕ್ಕೆ ಕೌಶಲ ಹೊಂದಿದ ಮಾನವಶಕ್ತಿಯನ್ನು ಸಜ್ಜುಗೊಳಿಸಲಿದೆ.
ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಚಿವ ಸಂಪುಟ ಸಮಿತಿ ಇಂದು ಶಿಕ್ಷಣ ಸಚಿವಾಲಯಕ್ಕೆ 2021-22ರಿಂದ 2025-26ರವರೆಗೆ ರಾಷ್ಟ್ರೀಯ ಅಪ್ರೆಂಟಿಶಿಪ್ ತರಬೇತಿ ಯೋಜನೆ (ಎನ್‌ಎಟಿಎಸ್) ಅಡಿಯಲ್ಲಿ ಅಪ್ರೆಂಟಿಶಿಪ್ ತರಬೇತಿ ಪಡೆಯುವವರಿಗೆ ಸ್ಟೈಂಡ್‌ಗಾಗಿ ₹ 3054 ಕೋಟಿ ಒದಗಿಸಲು ಅನುಮೋದಿಸಿದೆ.
ವಿವಿಧ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳಿಂದ ಸುಮಾರು 9 ಲಕ್ಷ ಅಪ್ರೆಂಟೀಸ್‌ಗಳು ತರಬೇತಿ ಪಡೆಯುವ ಸಾಧ್ಯತೆ ಇದೆ. ಎನ್‌ಎಟಿಎಸ್ ಭಾರತ ಸರಕಾರದ ಅತ್ಯಂತ ವ್ಯವಸ್ಥಿತ ಯೋಜನೆಯಾಗಿದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶದ ಸಂಭವನೀಯತೆಯನ್ನು ಹೆಚ್ಚಿಸುವಲ್ಲಿ ಉತ್ತಮ ಕೆಲಸ ಮಾಡುತ್ತಿದೆ.

ಮೊದಲಿಗಿಂತ 4.5 ಪಟ್ಟು ಹೆಚ್ಚು ಅನುದಾನ
ಇಂಜಿನಿಯರಿಂಗ್, ಲಲಿತಕಲೆಗಳು (ಹ್ಯೂಮ್ಯಾನಿಟೀಸ್), ವಿಜ್ಞಾನ ಮತ್ತು ವಾಣಿಜ್ಯದಲ್ಲಿ ಪದವಿ ಮತ್ತು ಡಿಪ್ಲೊಮಾ ಪೂರ್ಣಗೊಳಿಸಿದ ಅಪ್ರೆಂಟೀಸ್‌ಗಳಿಗೆ ಮಾಸಿಕ ಕ್ರಮವಾಗಿ ₹ 9000 ಮತ್ತು ₹ 8000 ನೀಡಲಾಗುವುದು. ಮುಂದಿನ ಐದು ವರ್ಷಗಳಿಗೆ ₹ 3054 ಕೋಟಿ ಹಣ ವ್ಯಯ ಮಾಡಲು ಸರಕಾರ ಅನುಮೋದನೆ ನೀಡಿದೆ. ಇದು ಹಿಂದಿನ ಐದು ವರ್ಷಗಳಲ್ಲಿ ವ್ಯಯ ಮಾಡಿದ್ದಕ್ಕಿಂತ 4.5 ಪಟ್ಟು ಹೆಚ್ಚಿನ ಮೊತ್ತವಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಅಪ್ರೆಂಟಿಶಿಪ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅದಕ್ಕೆ ಅನುಗುಣವಾಗಿ ಅಪ್ರೆಂಟಿಶಿಪ್‌ಗೆ ಮೊತ್ತವನ್ನೂ ಹೆಚ್ಚಿಸಲಾಗಿದೆ.

ವಿಸ್ತರಣೆಯಾದ ಎನ್‌ಎಟಿಎಸ್ ವ್ಯಾಪ್ತಿ
ಸರಕಾರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್- ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್’ಗೆ ಒತ್ತು ನೀಡುವುದರೊಂದಿಗೆ ಇಂಜಿನಿಯರ್ ಜೊತೆಗೆ ಲಲಿತಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನೂ ಸೇರಿಸುವ ಮೂಲಕ ಎನ್‌ಎಟಿಎಸ್ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಈ ಯೋಜನೆಯು ಕೌಶಲ ಪೂರಕ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ, ಕೌಶಲ ಮಟ್ಟದ ಗುಣಮಟ್ಟವನ್ನು ಹೆಚ್ಚಿಸುವ ಗುರಿ ಹೊಂದಿದೆ. ಇದರಿಂದ ಮುಂದಿನ ಐದು ವರ್ಷಗಳಲ್ಲಿ ಸುಮಾರು 7 ಲಕ್ಷ ಯುವಜನರಿಗೆ ಉದ್ಯೋಗವಕಾಶ ದೊರಕಲಿದೆ.

ಮೊಬೈಲ್ ಉತ್ಪಾದನೆ, ವೈದ್ಯಕೀಯ ಸಾಧನಗಳ ಉತ್ಪಾದನೆ, ಫಾರ್ಮಾ ವಲಯ, ಎಲೆಕ್ಟ್ರಾನಿಕ್ಸ್/ ತಂತ್ರಜ್ಞಾನ ಉತ್ಪನ್ನಗಳು, ಆಟೋ ಮೊಬೈಲ್ ವಲಯ ಇತ್ಯಾದಿ ಬೆಳವಣಿಗೆ ಹೊಂದುತ್ತಿರುವ ವಲಯದಲ್ಲಿ ಉತ್ಪಾದನೆ ಆಧರಿಸಿ ಪ್ರೋತ್ಸಾಹಧನ (ಪಿಎಲ್‌ಐ) ಯೋಜನೆಯಡಿ ಎನ್‌ಎಟಿಎಸ್ ಅಪ್ರೆಂಟಿಶಿಪ್ ನೀಡಲಿದೆ. ಈ ಯೋಜನೆಯು ಗತಿಶಕ್ತಿ ಅಡಿ ಗುರುತಿಸಲಾದ ಔದ್ಯಮಿಕ ವಲಯಕ್ಕೆ (ಸಂಪರ್ಕ ಮತ್ತು ಸಾರಿಗೆಗೆ) ಕೌಶಲ ಹೊಂದಿದ ಮಾನವಶಕ್ತಿಯನ್ನು ಸಜ್ಜುಗೊಳಿಸಲಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss