ಕೇಂದ್ರ ಸರಕಾರದ ಐತಿಹಾಸಿಕ ಬಜೆಟ್: ಕ್ರೀಡಾ ಕ್ಷೇತ್ರಕ್ಕೂ ಸಿಕ್ಕಿತು ದಾಖಲೆಯ 3,397.22 ಕೋಟಿ ರೂ. ಅನುದಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರಕಾರದ ಐತಿಹಾಸಿಕ ಬಜೆಟ್ ಅನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಡಿಸಿದ್ದು, ಈ ವೇಳೆ ಕ್ರೀಡಾ ಕ್ಷೇತ್ರಕ್ಕೆ (Sports) ದಾಖಲೆಯ 3,397.32 ಕೋಟಿ ರೂ. ಮೀಸಲಿಡಲಾಗಿದೆ.

ಈವರೆಗಿನ ಬಜೆಟ್‍ನಲ್ಲಿ ಇಷ್ಟು ದೊಡ್ಡ ಮೊತ್ತದ ಅನುದಾನ ಕ್ರೀಡಾಗೆ ನೀಡಿರಲಿಲ್ಲ. 2023ರ ಏಷ್ಯನ್ ಗೇಮ್ಸ್ (Asian Games), ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಸಿದ್ಧತೆಗಾಗಿ ಹೆಚ್ಚಿನ ಹಣ ಮೀಸಲಿಡಲಾಗಿದೆ. ಖೇಲೋ ಇಂಡಿಯಾಗಾಗಿ (Khelo India) 1,045 ಕೋಟಿ ರೂ. ಅನುದಾನ ನೀಡಲಾಗಿದೆ.

ರಾಷ್ಟ್ರೀಯ ಕ್ರೀಡಾ ಫೆಡರೇಷನ್‍ಗೆ 325 ಕೋಟಿ ರೂ. ನೆರವು ನೀಡಲಾಗಿದೆ. ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಈ ಬಾರಿ ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ಸ್ ಅರ್ಹತಾ ಪಂದ್ಯಗಳಿಗಾಗಿ 785.52 ಕೋಟಿ ರೂ. ಅನುದಾನ ನೀಡಲಾಗಿದೆ. 2022-2023ನೇ ಸಾಲಿನ ಬಜೆಟ್‍ನಲ್ಲಿ ಕ್ರೀಡೆಗೆ ನೀಡಿದ್ದ ಅನುದಾನ ಈ ಬಾರಿ 358.5 ಕೋಟಿ ರೂ.ಗೆ ಏರಿಕೆ ಕಂಡಿದ್ದು, 2022-2023ನೇ ಸಾಲಿನಲ್ಲಿ 2,757 ಕೋಟಿ ರೂ. ಅನುದಾನ ನೀಡಲಾಗಿತ್ತು.

2023-24 ಕ್ರೀಡಾ ಬಜೆಟ್ ಹಂಚಿಕೆ:
ಖೇಲೋ ಇಂಡಿಯಾ: 1,045 ಕೋಟಿ ರೂ.
ಸಾಯಿ: 785.52 ಕೋಟಿ ರೂ.
ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು: 325 ಕೋಟಿ ರೂ.
ರಾಷ್ಟ್ರೀಯ ಸೇವಾ ಯೋಜನೆ: 325 ಕೋಟಿ ರೂ.
ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ: 15 ಕೋಟಿ ರೂ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!