Sunday, August 14, 2022

Latest Posts

ಕನಸಿನ ಯೋಜನೆಯತ್ತ ಹೆಜ್ಜೆಡುತ್ತಿದೆ ಕೇಂದ್ರ ಸರಕಾರ: ದೇಶದಲ್ಲಿ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಎಲೆಕ್ಟ್ರಿಕ್​ ಹೆದ್ದಾರಿ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ವಿಶಿಷ್ಟ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಇಲಾಖೆ ಸಚಿವ ನಿತಿನ್​ ಗಡ್ಕರಿ ಇದೀಗ ಇನ್ನೊಂದು ಹೊಸ ವಿಷಯವನ್ನು ತಿಳಿಸಿದ್ದಾರೆ. ಅತಿ ಶೀಘ್ರದಲ್ಲೇ ದೆಹಲಿ ಮತ್ತು ರಾಜಸ್ಥಾನದ ಜೈಪುರದ ಮಧ್ಯೆ ಎಲೆಕ್ಟ್ರಿಕ್​ ಹೆದ್ದಾರಿ (Electric Highway) ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ.
ಎಲೆಕ್ಟ್ರಿಕ್​ ಹೆದ್ದಾರಿ ನಿರ್ಮಾಣ ಕೇಂದ್ರ ಸರ್ಕಾರದ ಕನಸಿನ ಯೋಜನೆಯಾಗಿದೆ. ಈ ಬಗ್ಗೆ ವಿದೇಶೀ ಕಂಪನಿಗಳೊಟ್ಟಿಗೆ ಮಾತುಕತೆ ನಡೆಸಲಾಗುತ್ತಿದೆ. ಅದು ಅಂತಿಮವಾಗುತ್ತಿದ್ದಂತೆ ಎಲೆಕ್ಟ್ರಿಕ್​ ಹೆದ್ದಾರಿ ನಿರ್ಮಾಣ ಕೆಲಸ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಹಾಗೊಮ್ಮೆ ಎಲ್ಲ ಸರಿಯಾಗಿ ದೆಹಲಿ ಮತ್ತು ಜೈಪುರ ನಡುವೆ ಎಲೆಕ್ಟ್ರಿಕ್​ ಹೆದ್ದಾರಿ ನಿರ್ಮಾಣಗೊಂಡರೆ ಅದು ದೇಶದ ಮೊದಲ ಎಲೆಕ್ಟ್ರಿಕ್​ ಹೈವೇ ಎನ್ನಿಸಿಕೊಳ್ಳಲಿದೆ. ಇನ್ನು ಇದರೊಟ್ಟಿಗೆ ದೆಹಲಿ ಮತ್ತು ಮುಂಬೈ ಮಧ್ಯೆಯೂ ಕೂಡ ಎಲೆಕ್ಟ್ರಿಕ್​ ಹೆದ್ದಾರಿ ನಿರ್ಮಾಣ ಸಂಬಂಧ ಸ್ವೀಡಿಶ್​ ಸಂಸ್ಥೆಯೊಟ್ಟಿಗೆ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಏನಿದು ಎಲೆಕ್ಟ್ರಿಕ್​ ಹೆದ್ದಾರಿ?
ಜಗತ್ತಿನಲ್ಲೇ ಮೊದಲ ಬಾರಿಗೆ ಎಲೆಕ್ಟ್ರಿಕ್​ ಹೆದ್ದಾರಿ ನಿರ್ಮಾಣ ಮಾಡಿದ ದೇಶ ಸ್ವೀಡನ್​. ಇದೀಗ ಜರ್ಮನಿಯಲ್ಲೂ ಇದೆ. ಹಾಗೇ ಭಾರತ ಕೂಡ ಮೊದಲ ಎಲೆಕ್ಟ್ರಿಕ್​ ಹೆದ್ದಾರಿ ನಿರ್ಮಾಣಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ. ಇಡೀ ಜಗತ್ತಿನಲ್ಲಿ ಪೆಟ್ರೋಲ್​, ಡೀಸೆಲ್​​ಗೆ ಪರ್ಯಯ ಇಂಧನಗಳ ಹುಡುಕಾಟ ನಡೆದಿದೆ. ಅದರಲ್ಲಿ ಸದ್ಯ ಹೆಚ್ಚಾಗಿ ಪ್ರಸಿದ್ಧಿಯಾಗಿದ್ದು, ಎಲೆಕ್ಟ್ರಿಕ್​ ವಾಹನಗಳು. ಹೆಚ್ಚು ಜನರು ವಿದ್ಯುಚ್ಚಾಲಿತ ವಾಹನಗಳ ಬಳಕೆ, ಖರೀದಿಗೆ ಮುಂದಾಗುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಎಲೆಕ್ಟ್ರಿಕ್​ ಹೈವೇ ನಿರ್ಮಾಣ ಮಾಡುವುದರಿಂದ, ಇದರ ಮೂಲಕ ಚಲಿಸುವ ವಿದ್ಯುಚ್ಚಾಲಿತ ವಾಹನಗಳಿಗೆ, ಅದು ಬಸ್​, ಟ್ರಕ್​ ಯಾವುದೇ ಇರಬಹುದು ತುಂಬ ಅನುಕೂಲವಾಗುತ್ತದೆ. ವಾಹನಗಳು ಈ ಹೆದ್ದಾರಿಯಿಂದ ವಿದ್ಯುತ್​ ಶಕ್ತಿ ಪಡೆದು ಸಾಗುತ್ತವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss