ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಗೆ ಕೇಂದ್ರ ರೈಲ್ವೆ ಯೋಜನಾ ಸಮಿತಿ ಒಲವು

ಹೊಸದಿಗಂತ ವರದಿ,ಕಾರವಾರ :

ಉತ್ತರ ಕನ್ನಡ ಜಿಲ್ಲೆಯುಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯ ಕಾಮಗಾರಿಯನ್ನು ಪ್ರಾರಂಭವಾಗುವುದು ಅವಶ್ಯಕವಾಗಿದ್ದು, ಜಿಲ್ಲೆಯಜನರ ಬಹುದಿನಗಳ ಬೇಡಿಕೆಯು ಸಹ ಇದಾಗಿದೆ ಎಂದು ಕೇಂದ್ರದ ರೈಲ್ವೆ ಯೋಜನಾ ಸಮಿತಿ ಅಭಿಪ್ರಾಯಿಸಿತು.

ನಗರದ ಜಿಲ್ಲಾಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಹುಬ್ಬಳ್ಳಿ-ಅಂಕೋಲಾ ರೈಲಿನ ಬೇಡಿಕೆಯ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಕೇಂದ್ರರೈಲ್ವೇಯೋಜನಾ ಸಮಿತಿಯ ಅಕಾರಿಗಳು ಮೇಲಿನ ರೀತಿಅಭಿಪ್ರಾಯಕ್ಕೆ ಬಂದರು.

ರೈಲ್ವೇ ಯೋಜನೆಯ ಸಾಧಕ ಬಾಧಕ ಕುರಿತಾಗಿ ಸಭೆಯಲ್ಲಿ ಚರ್ಚಿಸಲಾಯಿತು.

ರೈಲ್ವೇ ಯೋಜನೆಯಿಂದಾಗಿ ಅಪಾರ ಪ್ರಮಾಣದ ಅರಣ್ಯ ನಾಶವಾಗುವುದು, ವನ್ಯಪ್ರಾಣಿಗಳ ವಾಸಸ್ಥಾನದ ಪಲ್ಲಟವಾಗುವ ಆತಂಕವಿದೆ.ಅರಣ್ಯ ನಾಶದಿಂದ ಮಳೆಗಾಲದ ಸಂದರ್ಭದಲ್ಲಿ ಮಳೆ ನೀರಿನಹರಿವಿನ ದಿಕ್ಕು ಬದಲಾವಣೆಯಾಗುವುದರಿಂದ ನೀರಿನ ಹಂಚಿಕೆಯಲ್ಲಿಅಭಾವ ಸೃಷ್ಟಿಯಾಗಬಹುದು. ಗುಡ್ಡ ಕುಸಿತ ಪ್ರದೇಶಗಳಲ್ಲಿ ಈ ಯೋಜನೆ ಫಲದಾಯಕವಲ್ಲ ಎಂಬ ಅಭಿಪ್ರಾಯ ಸಲಹಾ ಸಮಿತಿಯಿಂದ ವ್ಯಕ್ತವಾಯಿತು.

ಅಭಿವೃದ್ಧಿಗೆ ಪೂರಕ :

ಕೇಂದ್ರರೈಲ್ವೇಯೋಜನೆ ಸಮಿತಿ ಅಕಾರಿಗಳು ಯೋಜನೆಯ ಕುರಿತಾಗಿ ಮಾತನಾಡಿ, ಈ ಯೋಜನೆಯು ಜಿಲ್ಲೆಯಅಭಿವೃದ್ಧಿದೃಷ್ಟಿಯಿಂದಉತ್ತಮವಾದ ಯೋಜನೆಯಾಗಿದೆ. ಜನಸಂಚಾರ, ಸರಕು ಸಾಗಣೆಗೆ ಹಾಗೂ ಸಮಯದ ಉಳಿತಾಯವಾಗುವುದರಿಂದ ಈ ಯೋಜನೆಯನ್ನುಜಿಲ್ಲೆಯಜನ ಸ್ವಾಗತಿಸುತ್ತಾರೆ.ಅಭಿವೃದ್ಧಿ ಕಾರಣದಿಂದಾಗಿ ಕೆಲವು ಬದಲಾವಣೆಗಳಿಗೆ ಒಪ್ಪಿಕೊಳ್ಳುವಂತ ನಿರ್ಧಾರಕ್ಕೆ ಬರಲೇಬೇಕು ಎಂದು ತಿಳಿಸಿದರು.

ಈ ಸಭೆಯಲ್ಲಿ ರೈಲ್ವೇಯೋಜನಾ ಸಮಿತಿ ಅಕಾರಿಗಳಾದ ಡಾ.ಎಚ್.ಎಸ್.ಸಿಂಗ್, ಭಾರತೀಯ ಅರಣ್ಯ ಸೇವಾ ಸಿಡಬ್ಲ್ಯೂಎಲ್‌ಡಬ್ಲ್ಯೂ ವಿಜಯಕುಮಾರ, ಭಾರತೀಯಅರಣ್ಯ ಸೇವಾಡಿಐಜಿರಾಕೇಶ, ಡಾ. ರಾಜೇಂದ್ರಕುಮಾರ, ಡಾ.ಟಿ.ಎನ್. ಮನೋಹರ, ಪ್ರೊ. ನಾಗೇಶ್, ಜಿಲ್ಲಾಕಾರಿ ಮುಲ್ಲೈ ಮುಗಿಲನ್ ಎಂ.ಪಿ, ಅಪರ ಜಿಲ್ಲಾಕಾರಿ ರಾಜು ಮೊಗವೀರ, ಕಾರವಾರ ವಿಭಾಗದಅರಣ್ಯಾಕಾರಿರಾಘವೇಂದ್ರ ನಾಯ್ಕ ಹಾಗೂ ಇತರ ಅಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!