ಪಂಜಾಬ್‌ನ ನಾಲ್ವರು ಬಿಜೆಪಿ ನಾಯಕರಿಗೆ ‘ಎಕ್ಸ್’ ವರ್ಗದ ಭದ್ರತೆ ನೀಡಿದ ಕೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಂದ್ರ ಸರ್ಕಾರ ಪಂಜಾಬ್‌ನ ನಾಲ್ವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ‘ಎಕ್ಸ್’ ವರ್ಗದ ಸಶಸ್ತ್ರ ಭದ್ರತೆಯನ್ನು ಒದಗಿಸಿದೆ ಎಂದು ಸರ್ಕಾರದ ಉನ್ನತ ಮೂಲಗಳು ಶನಿವಾರ ತಿಳಿಸಿವೆ.
ಇಂಟಲಿಜೆನ್ಸ್ ಬ್ಯೂರೋ (ಐಬಿ) ವರದಿಯ ಆಧಾರದ ಮೇಲೆ ಭದ್ರತಾ ಮೌಲ್ಯಮಾಪನದ ನಂತರ ಈ ಬಿಜೆಪಿ ನಾಯಕರಿಗೆ ‘ಎಕ್ಸ್-ಕ್ಯಾಟಗರಿ’ ರೌಂಡ್-ದಿ-ಕ್ಲಾಕ್ ರಕ್ಷಣೆ ನೀಡಲು ಸಿಆರ್‌ಪಿಎಫ್‌ಗೆ ಗೃಹ ಸಚಿವಾಲಯ (ಎಂಎಚ್‌ಎ) ಆದೇಶ ನೀಡಿದೆ.

ಪಂಜಾಬ್ ಕ್ಯಾಬಿನೆಟ್‌ನ ಮಾಜಿ ಸಚಿವರಾದ ಬಲ್ಬೀರ್ ಸಿಂಗ್ ಸಿಧು ಮತ್ತು ಗುರುಪ್ರೀತ್ ಸಿಂಗ್ ಕಂಗಾ ಜೊತೆಗೆ ಮಾಜಿ ಶಾಸಕ ಜಗದೀಪ್ ಸಿಂಗ್ ನಕೈ ಮತ್ತು ಅಮರ್‌ಜಿತ್ ಸಿಂಗ್ ಟಿಕ್ಕಾ ಭದ್ರತೆ ಒದಗಿಸಿದ ಬಿಜೆಪಿ ನಾಯಕರಲ್ಲಿ ಸೇರಿದ್ದಾರೆ. ಈ ನಾಲ್ವರು ನಾಯಕರು ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಈ ಹಿಂದೆ ಕೂಡ ಐಬಿ ವರದಿ ಆಧರಿಸಿ ಅಕ್ಟೋಬರ್‌ನಲ್ಲಿ ಕೇಂದ್ರವು ಪಂಜಾಬ್‌ನ ಐವರು ಬಿಜೆಪಿ ನಾಯಕರಿಗೆ ‘ವೈ’ ವರ್ಗದ ಭದ್ರತೆಯನ್ನು ಒದಗಿಸಿತ್ತು.

ಭದ್ರತೆ ಒದಗಿಸುವಂತೆ ಸಿಐಎಸ್‌ಎಫ್ ಮತ್ತು ಸಿಆರ್‌ಪಿಎಫ್‌ಗೆ ಎಂಎಚ್‌ಎ ವಹಿಸಿದೆ. ಎರಡೂ ಅರೆಸೈನಿಕ ಪಡೆಗಳು ಕಮಾಂಡೋಗಳ ವಿಶೇಷ ವಿಐಪಿ ಭದ್ರತಾ ವಿಭಾಗಗಳನ್ನು ಹೊಂದಿವೆ. ಅತ್ಯಾಧುನಿಕ ನಿಕಟ-ರಕ್ಷಣಾ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!