ಓಲಾ, ಊಬರ್‌ಗಳ ಅನುಚಿತ ವರ್ತನೆಗೆ ಕೇಂದ್ರ ಸಚಿವಾಲಯ ನೊಟೀಸ್:‌ 15ದಿನದೊಳಗೆ ಉತ್ತರಿಸುವಂತೆ ತಾಕೀತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕ್ಯಾಬ್‌ ಚಾಲಕರ ವರ್ತನೆಯಿಂದ ಬೇಸತ್ತು ಗ್ರಾಹಕರಿಂದ ಬರುತ್ತಿರುವ ಹೆಚ್ಚಿನ ದೂರುಗಳಿಗೆ ಕೇಂದ್ರ ಸ್ಪಂದಿಸಿದೆ. ಕ್ಯಾಬ್ ನಿರ್ವಹಣಾ ಕಂಪನಿಗಳಾದ ಓಲಾ, ಉಬರ್, ಮೇರು, ರಾಪಿಡೋ ಮತ್ತು ಜುಗ್ನುಗಳಿಗೆ ನೋಟಿಸ್ ನೀಡಿದ್ದು, 15ದಿನಗಳೊಳಗೆ ಉತ್ತರ ನೀಡುವಂತೆ ಸೂಚಿಸಿದೆ. ಕೆಲ ದಿನಗಳ ಹಿಂದಷ್ಟೇ ಕ್ಯಾಬ್‌ ಅಗ್ರಿಗೇಟರ್‌ಗಳ ಜೊತೆ ಸಭೆ ನಡೆಸಿ ಈ ಕುರಿತು ಪರಿಶೀಲನೆ ನಡೆಸುವಂತೆ ವಾರ್ನ್‌ ಮಾಡಲಾಗಿತ್ತು. ಆದರೆ, ಪದೇ ಪದೇ ದೂರು ದಾಖಲಾಗುತ್ತಿರುವುದರಿಂದ ಕೇಂದ್ರ ಇದೀಗ ನೊಟೀಸ್‌ ಜಾರಿಗೊಳಿಸಿದೆ.

ಕ್ಯಾಬ್ ಕಂಪನಿಗಳು ಇದ್ದಕ್ಕಿದ್ದಂತೆಯೇ ಪ್ರಯಾಣ ದರವನ್ನು ಏರಿಸುತ್ತಿವೆ. ಎಸಿ ಬಳಕೆಗೆ ವಿಶೇಷ ಶುಲ್ಕ, ಅಸಮಂಜಸವಾದ ರದ್ದತಿ ಶುಲ್ಕ, ಕೆಲವು ಮಾರ್ಗಗಳಲ್ಲಿ ಕಡಿಮೆ ಸೇವೆ ಮತ್ತು ಚಾಲಕರು ಡಿಜಿಟಲ್ ಪಾವತಿ ಬದಲಿಗೆ ನಗದು ಬೇಡಿಕೆ ಮತ್ತು  ಕೋವಿಡ್ -19 ಶುಲ್ಕಗಳನ್ನು ವಿಧಿಸುವಂತಹ ಅನ್ಯಾಯದ ಕೆಲಸದ ವಿರುದ್ಧ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಪ್ರತಿಕ್ರಿಯಿಸಿದೆ. ಗ್ರಾಹಕರ ಹಕ್ಕುಗಳ ಕಾವಲು ಸಂಸ್ಥೆಯಾದ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಕ್ಯಾಬ್ ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಿ, ಹದಿನೈದು ದಿನದೊಳಗೆ ಉತ್ತರಿಸುವಂತೆ ಆದೇಶಿಸಿದೆ.

ಹಾಗೆ ಕಂಪನಿ ಅನುಸರಿಸುವ ಅಲ್ಗಾರಿದಮ್‌ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಗ್ರಾಹಕರ ಸಮಸ್ಯೆಗಳಿಗೆ ಕಂಪನಿಗಳು ಸರಿಯಾಗಿ ಸ್ಪಂದಿಸದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಕೇಂದ್ರ ಎಚ್ಚರಿಕೆ ನೀಡಿದೆ. ಹೆಚ್ಚುತ್ತಿರುವ ಇಂಧನ ಬೆಲೆಗಳಿಂದ ಊಬರ್ ದರವನ್ನು ತೀವ್ರವಾಗಿ ಏರಿಸುತ್ತಿದೆ. ಅಲ್ಲದೆ ಚಾಲಕರಿಗೆ ವಾರಕ್ಕೆ ಎರಡು ಬಾರಿ ಪಾವತಿಗಳನ್ನು ನೀಡಲಾಗುತ್ತಿದೆ. ಗ್ರಾಹಕರು ಯಾವ ಮೋಡ್‌ನಲ್ಲಿ ಪಾವತಿಸಬಹುದು ಎಂಬುದನ್ನು ಚಾಲಕರಿಗೆ ಮುಂಚಿತವಾಗಿ ತಿಳಿಯಲು ಅಪ್ಲಿಕೇಶನ್ ಅನ್ನು ಅಪ್‌ಗ್ರೇಡ್ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಓದಿಗಾಗಿ ಈ ಲಿಂಕ್‌ ಅನ್ನ ಒತ್ತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!