ಉದ್ಯೋಗಿಗಳು ತೂಕ ಇಳಿಸಿಕೊಂಡರೆ ರೂ. 10ಲಕ್ಷ ಬಹುಮಾನ ಘೋಷಿಸಿದ ‘ಝೆರೋಧಾ’ ಸಿಇಒ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆನ್‌ಲೈನ್ ಬ್ರೋಕರೇಜ್ ಸಂಸ್ಥೆ ಝೆರೋಧಾ (Zerodha) ಮನೆಯಿಂದ ಕೆಲಸ ಮಾಡುವ ತನ್ನ ಉದ್ಯೋಗಿಗಳಿಗೆ ಬಂಪರ್ ಆಫರ್ ನೀಡಿದೆ. ತಮ್ಮ ಉದ್ಯೋಗಿಗಳು ಆರೋಗ್ಯವಾಗಿರಲಿ ಎಂದು ಹಾರೈಸಿರುವ ‘ಝೆರೋಧಾ’ ಸಿಇಒ ನಿತಿನ್ ಕಾಮತ್ ಬಂಪರ್ ಆಫರ್ ಘೋಷಿಸಿದ್ದು, ತೂಕ ಇಳಿಸಿಕೊಂಡರೆ ರೂ. 10 ಲಕ್ಷವನ್ನು ಉಡುಗೊರೆಯಾಗಿ ನೀಡುವುದಾಗಿ ನಿತಿನ್ ಕಾಮತ್ ತಿಳಿಸಿದರು. ಸಿಇಒ ನಿತಿನ್, ತಮ್ಮ ಉದ್ಯೋಗಿಗಳು ಆರೋಗ್ಯವಾಗಿರಬೇಕು ಮತ್ತು ಯಾವುದೇ ಅನಾರೋಗ್ಯ ಸಮಸ್ಯೆಗಳಿಂದ ಬಳಲಬಾರದು ಎಂದು ಹಾರೈಸಿದ್ದಾರೆ. ಹಾಗಾಗಿ ಅವರು ತಮ್ಮ ಉದ್ಯೋಗಿಗಳಿಗೆ ‘ಫಿಟ್ನೆಸ್ ಚಾಲೆಂಜ್’ ಮಾಡಿ ತೂಕ ಇಳಿಸುವ ನೌಕರರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಜೆರೋಧಾ ಸಿಇಒ ನಿತಿನ್ ಕಾಮತ್ ತಿಳಿಸಿದರು.

ದಿನವೊಂದಕ್ಕೆ 350 ಕ್ಯಾಲೋರಿ ಬರ್ನ್ ಮಾಡುವ ನೌಕರರಿಗೆ ವಿವಿಧ ರೀತಿಯ ಪ್ರೋತ್ಸಾಹ ಸಹ ನೀಡಲಾಗುವುದು. ನಿಗದಿತ ಕಾಲಮಿತಿಯೊಳಗೆ ಗುರಿ ತಲುಪಿದವರಿಗೆ ಒಂದು ತಿಂಗಳ ವೇತನವನ್ನು ಬೋನಸ್ ಆಗಿ ನೀಡಲಾಗುತ್ತದೆ. ತೂಕ ಇಳಿಸಿಕೊಂಡ ನೌಕರರಿಗೆ ಲಕ್ಕಿ ಡ್ರಾ ನಡೆಸಿ 10 ಲಕ್ಷ ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.

ಝೆರೋಡಾದ ಸಿಇಒ ನಿತಿನ್ ಕಾಮತ್ ಮಾತನಾಡಿ, ಮನೆಯಿಂದಲೇ ಕೆಲಸ ಮಾಡುವವರು ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ದೈಹಿಕ ವ್ಯಾಯಾಮದ ಕೊರತೆಯಿಂದ ಅನೇಕ ಜನರು ತೂಕವನ್ನು ಹೆಚ್ಚಿಸುತ್ತಾರೆ. ಇದು ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!