Thursday, March 23, 2023

Latest Posts

ಗಮನ ಸೆಳೆದ ಸಿರಿಧಾನ್ಯಗಳ ಜಾಗೃತಿ ನಡಿಗೆ

ಹೊಸ ದಿಗಂತ ವರದಿ, ಕೊಪ್ಪಳ:

ರಜತ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಕೊಪ್ಪಳ ಕೃಷಿ ತಂತ್ರಜ್ಞರ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ನಗರದಲ್ಲಿ ಸಿರಿಧಾನ್ಯಗಳ ಜಾಗೃತಿ ನಡಿಗೆ ಕಾರ್ಯಕ್ರಮ ನಡೆಯಿತು.
ನಮ್ಮ ನಡಿಗೆ ಸಿರಿಧಾನ್ಯಗಳ ಕಡೆಗೆ ಎಂಬ ಘೋಷ ವಾಕ್ಯದೊಂದಿಗೆ ಸಿರಿಧಾನ್ಯಗಳ ಜಾಗೃತಿ ನಡಿಗೆಯು ಗವಿಮಠದ ಆವರಣದಿಂದ ಪ್ರಾರಂಭಗೊಂಡು, ಗವಿಮಠ ರಸ್ತೆ ಮೂಲಕ ಗಡಿಯಾರ ಕಂಬ ವೃತ್ತ, ಜವಾಹರ ರಸ್ತೆ ಮಾರ್ಗವಾಗಿ ಸಾಹಿತ್ಯ ಭವನದವರೆಗೆ ನಡೆಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!