ಜೂನ್ 16, 17, 18 ರಂದು ಸಿಇಟಿ ಪರೀಕ್ಷೆ: ಮೇ 30ರಂದು ಪ್ರವೇಶ ಪತ್ರ ಲಭ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜೂನ್ 16, 17 ಹಾಗೂ 18ರಂದುವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಸುವ ಸಿಇಟಿ ಪರೀಕ್ಷೆ ನಡೆಯಲಿದೆ. ರಾಜ್ಯ ಸರ್ಕಾರದ ನಿರ್ದೇಶನದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮೊದಲನೇ ವರ್ಷ/ಮೊದಲ ಸೆಮಿಸ್ಟರ್ ಪ್ರವೇಶಕ್ಕೆ ಪರೀಕ್ಷೆ ನಡೆಸಲಿದೆ.
ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ ಕೋರ್ಸ್​ಗಳ​ ಪ್ರವೇಶಕ್ಕಾಗಿ 2022ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ.
ಪರೀಕ್ಷೆಯು ಬೆಳಗ್ಗೆ 10:30ರಿಂದ 11:50ರವರೆಗೆ ಹಾಗೂ ಮಧ್ಯಾಹ್ನ 2:30ರಿಂದ 3:50ರ ಗಂಟೆವರೆಗೆ ನಡೆಯಲಿದ್ದು, ಪ್ರತಿ ವಿಷಯಕ್ಕೂ 60 ಅಂಕ ನಿಗದಿ ಮಾಡಲಾಗಿದೆ.
ಜೂನ್ 16 – ಜೀವಶಾಸ್ತ್ರ, ಗಣಿತ, ಜೂನ್ 17 – ಭೌತಶಾಸ್ತ್ರ, ರಸಾಯನಶಾಸ್ತ್ರ, ಜೂನ್ 18 – ಕನ್ನಡ ಭಾಷಾ ಪರೀಕ್ಷೆ
ಮೇ 30ರಂದು ಅಭ್ಯರ್ಥಿಗಳು ಸಿಇಟಿ ಪರೀಕ್ಷೆ ಪ್ರವೇಶ ಪತ್ರಗಳನ್ನು ಬೆಳಗ್ಗೆ 11 ಗಂಟೆ ಬಳಿಕ ಡೌನ್​ಲೋಡ್ ಮಾಡಿಕೊಳ್ಳಬಹುದು. ಅದೇ ದಿನ ಪರೀಕ್ಷೆಯ ಮಾರ್ಗಸೂಚಿ ಬಿಡುಗಡೆ ಆಗಲಿದೆ.
ಈ ಸಲದ ಸಿಇಟಿ ಪರೀಕ್ಷೆಗೆ ಒಟ್ಟು 2 ಲಕ್ಷದ 11 ಸಾವಿರ ವಿದ್ಯಾರ್ಥಿಗಳು ನೋಂದಾಯಿಸಿದ್ದು, ಈ ಪೈಕಿ 1 ಲಕ್ಷದ 4 ಸಾವಿರ ಪುರುಷ ವಿದ್ಯಾರ್ಥಿ, 1 ಲಕ್ಷದ 7 ಸಾವಿರ ಮಹಿಳಾ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಪರೀಕ್ಷೆಗೆ ಯಾವುದೇ ರೀತಿಯ ಆಭರಣಗಳನ್ನ ಧರಿಸಿ ಪರೀಕ್ಷೆ ಬರೆಯುವಂತಿಲ್ಲ. ಡಿಜಿಟಲ್ ವಾಚ್, ಕ್ಯಾಲ್ಕುಲೇಟರ್​​ಗಳಿಗೂ ನಿಷೇಧ ಇರಲಿದೆ. ಅಲ್ಲದೇ ಪರೀಕ್ಷಾ ಕೇಂದ್ರದಲ್ಲಿ ಇದೇ ಮೊದಲ ಬಾರಿಗೆ ಜಾಮರ್, ಮೆಟಲ್ ಡಿಡೆಕ್ಟರ್​​ಗಳ ಅಳವಡಿಕೆಗೂ ಕೆಇಎ ಬೋರ್ಡ್ ಚಿಂತನೆ ನಡೆಸಿದೆ.‌

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!