ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೋವಿಡ್ ಲಸಿಕೆ ಇನ್ನು ಮುಂದೆ ಕೇಂದ್ರವೇ ಉಚಿತವಾಗಿ ಪೂರೈಸಲಿದೆ, ವಿಪಕ್ಷಗಳು ಟೀಕೆಯನ್ನು ನಿಲ್ಲಿಸಬೇಕು: ಸಚಿವ ಕೆ.ಎಸ್. ಈಶ್ವರಪ್ಪ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಶಿವಮೊಗ್ಗ:

ಇದುವರೆಗೂ ಕೋವಿಡ್ ಲಸಿಕೆಯನ್ನು ರಾಜ್ಯ ಸರ್ಕಾರಗಳೂ ಖರೀದಿ ಮಾಡಬೇಕಿತ್ತು. ಅದರೆ ಇನ್ನು ಮುಂದೆ ಕೇಂದ್ರವೇ ಉಚಿತವಾಗಿ ಲಸಿಕೆ ಪೂರೈಸಲಿದ್ದು, ಇದರಿಂದ ಸಾಕಷ್ಟು ಲಸಿಕೆ ಲಭ್ಯವಾಗಲಿವೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಲಸಿಕೆ ಹಾಕಿಸಿಕೊಳ್ಳಬೇಡಿ ಎಂದವರೇ ಇಂದು ಲಸಿಕೆ ಅಲಭ್ಯತೆಗೆ ಮೋದಿ ಹಾಗು ಯಡಿಯೂರಪ್ಪ ಕಾರಣವೆಂದು ಟೀಕಿಸುತ್ತಿದ್ದಾರೆ. ಅವರ ಬುದ್ದಿಗೇಡಿ ವರ್ತನೆಗೆ ಏನು ಹೇಳಬೇಕು ಎಂದರು.
ಲಸಿಕೆ ಹೆಸರಿನಲ್ಲಿ ನೀರು ತುಂಬಿ ಕೊಡಲಾಗುತ್ತಿದೆ. ಪುರುಷತ್ವ ಹರಣವಾಗುತ್ತದೆ ಎಂದೆಲ್ಲಾ ಅಪಪ್ರಚಾರ ಮಾಡಿ, ಮೊದಲು‌ ಪ್ರಧಾನಿ, ಸಿಎಂ ಹಾಕಿಸಿಕೊಳ್ಳಲಿ ಎಂದು ಒತ್ತಾಯಿಸಿದ್ದರು. ವಿಪಕ್ಷ ನಾಯಕರು ಇಂತಹ ತಿಳಿಗೇಡಿತನದ ಟೀಕೆ ಬಿಡಬೇಕು. ಕಾಂಗ್ರೆಸ್ ಗೆ ವಿಪಕ್ಷವಾಗಿ ಟೀಕೆ ಮಾಡಲು ಬರುವುದಿಲ್ಲ ಎಂದು ಹರಿಹಾಯ್ದರು.
ಜಿಲ್ಲೆಯಲ್ಲಿ ಕೊರೋನಾ ಸೋಂಕು ಕಡಿಮೆಯಾಗುತ್ತದೆ. ಹೀಗಾಗಿ ಲಾಕ್ ಡೌನ್ ಮುಂದುವರಿಸಬೇಕೇ ಬೇಡವೇ ಎನ್ನುವುದರ ಬಗ್ಗೆ ಸಂಘಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನಿಸಲಾಗುತ್ತದೆ. ಬಂದ್ ಮಾಡಿ ಎಂದಾಕ್ಷಣ ಎಲ್ಲಾ ವರ್ತಕರು ಬೆಂಬಲ ನೀಡಿ ಬಂದ್ ಮಾಡಿದ್ದರು. ಕೊರೋನಾ ನಿಯಂತ್ರಣಕ್ಕೆ ಬರುವಲ್ಲಿ ಅವರ ಸಹಕಾರವೂ ಮುಖ್ಯವಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss