Wednesday, July 6, 2022

Latest Posts

ಮೃತ ಕೋವಿಡ್ ಸೋಂಕಿತ ಮಹಿಳೆಯ ಮಾಂಗಲ್ಯ ಸರ ಕಳವು

ದಿಗಂತ ವರದಿ ಚಿಕ್ಕಬಳ್ಳಾಪುರ:

ಕೋವಿಡ್ ಸೋಂಕಿನಿಂದ ಮೃತಳಾದ ಮಹಿಳೆಯ ಮಾಂಗಲ್ಯ ಸರ ಕಳವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ನಡೆದಿದೆ.

ಅಂದಾರ್ಲಹಳ್ಳಿ ಗ್ರಾಮದ ಲಕ್ಷ್ಮಮ್ಮ ಕೊರೊನಾ ದಿಂದ ಮೃತಪಟ್ಟಿದ್ದರು. ಮೃತದೇಹ ಪಡೆಯಲು ಬಂದ ಸಂಬಂಧಿಕರು ಮೃತ ಮಹಿಳೆಯ ಮೈಮೇಲೆ ಇದ್ದ ಆಭರಣಗಳನ್ನು ಕೇಳಿದ್ದಾರೆ. ಈ ವೇಳೆ ಮೊದಲು ಬೆಳ್ಳಿ ಕಾಲು ಚೈನ್ ತದನಂತರ ಬಂಗಾರದ ಕಿವಿ ಒಲೆ ತಂದುಕೊಟ್ಟಿದ್ದಾರೆ. ಆದರೆ ಮಾಂಗಲ್ಯ ಸರ ಎಲ್ಲಿ ಎಂತ ಕೇಳಿದಾಗ ಯಾರ ಬಳಿಯೂ ಉತ್ತರ ಇರಲಿಲ್ಲ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ

ಇದರಿಂದ ಮೃತಳ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ವಿರುದ್ದ ಆಸಮಾಧಾನ ಹೊರ ಹಾಕಿ ಸದ್ಯ ಎಸ್ಪಿ, ಡಿವೈಎಸ್ಪಿ ಗಮನಕ್ಕೆ ತಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಎಸ್ಪಿ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss