ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾಜ್ಯದಲ್ಲಿ ಕೊರೋನಾ ಅಬ್ಬರ: ಇವೆಂಟ್- ಶೋಗಳ ಶೂಟಿಂಗ್ ರದ್ದಾಗಿದೆ ಎಂದ ಚೈತ್ರಾ ವಾಸುದೇವನ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………….

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಎಲ್ಲಾ ಕ್ಷೇತ್ರಕ್ಕೂ ಸಂಕಷ್ಟ ತಂದೊಡ್ಡಿದ್ದು, ಬಿಗ್ ಬಾಸ್ ಸ್ಪರ್ಧಿ ಹಾಗೂ ನಿರೂಪಕಿ ಚೈತ್ರಾ ವಾಸುದೇವನ್ ಅವರು ಕೂಡ ಈಗ ಯಾವುದೇ ಶೋಗಳ ಶೂಟಿಂಗ್ ಇಲ್ಲ ಎಂದು ಹೇಳುತ್ತಾರೆ.

‘ನಾವು ಕೊರೋನಾ ಮೊದಲನೇ ಅಲೆಯಲ್ಲಿ ಸಾಮಾನ್ಯ ಬದುಕಿಗೆ ಬಂದಿದ್ದೆವು. ವಿಶೇಷವಾಗಿ ಶೋಗಳು ಕಷ್ಟದೊಂದಿಗೆ ಆರಂಭವಾಗಿದ್ದವು. ಹಲವು ದಿನಗಳು ಕಾದ ನಂತರ ದೊಡ್ಡ ಶೋಗಳು ಎರಡನೇ ಅಲೆಯ ಪರಿವೇ ಇಲ್ಲದೆ ಆರಂಭವಾಗಿದ್ದವು. ನಾವು ಬಿಗಿಯಾಗಿ ನಿಯಮಗಳನ್ನು ಪಾಲಿಸಿಕೊಂಡು ಶೂಟಿಂಗ್ ಮಾಡುತ್ತಿದ್ದೆವು. ಆದರೆ, ಈಗ ಎರಡನೇ ಅಲೆ ಎಲ್ಲ ಇವೆಂಟ್ ಹಾಗೂ ಶೋಗಳ ಶೂಟಿಂಗ್ ರದ್ದಾಗಿಸಿದೆ.

ಲಾಕ್​ಡೌನ್​ನಲ್ಲಿ ಕಲಾವಿದರು ಸಂಕಷ್ಟದ ಕುರಿತಾಗಿ ಹೇಳಿದ ಅವರು, ‘ಕಲಾವಿದರು ಜನರ ನಡುವೆ ಇರುತ್ತಾರೆ. ಆದರೆ, ಈ ಪರಿಸ್ಥಿತಿಯಲ್ಲಿ ನಾವು ಜನರಿಂದ ದೂರವಿದ್ದು ನಾಲ್ಕು ಗೋಡೆಗಳ ನಡುವೆ ಕುಳಿತುಕೊಳ್ಳಬೇಕಿದೆ. ಈ ಎರಡನೇ ಅಲೆಯ ನಂತರ ನಮ್ಮ ಸಂಭಾವನೆ ಕಡಿತಗೊಳ್ಳಲಿದೆ. ನಾವು ಭವಿಷ್ಯದ ಕುರಿತು ವೇದಿಕೆಗೆ ಮರಳಿ ಬರುವ ಕುರಿತು ಖಚಿತತೆ ಹೊಂದಿಲ್ಲ ಎಂದು ಚೈತ್ರಾ ಹೇಳಿದ್ದಾರೆ.

ನಾನು ಹಲವು ನಿರ್ಮಾಪಕರನ್ನು ನೋಡಿದ್ದೇನೆ. ಅವರು ಸಿನಿಮಾ ಆಡಿಯೋ ಲಾಂಚ್ ಹಾಗೂ ಪ್ರಮೋಷನ್ ಇವೆಂಟ್​ಗಳಿಗೆ ನನ್ನನ್ನು ನಿರೂಪಕಿಯಾಗಿ ಕರೆದಿದ್ದರು. ಸದ್ಯ ಅವರು ತಮ್ಮ ಸಿನಿಮಾ ಯಾವಾಗ ಬಿಡುಗಡೆಯಾಗುವುದೋ ಎಂದು ಯೋಚಿಸುತ್ತಿದ್ದಾರೆ. ಅವರು ಸಿನಿಮಾಗಳಿಗೆ ತುಂಬಾ ಬಂಡವಾಳ ಹಾಕಿರುತ್ತಾರೆ. ಅವರ ಬಗ್ಗೆ ಯೋಚಿಸಿದರೆ ಬೇಸರವಾಗುತ್ತಿದೆ. ನನಗೆ ಶೋ ನಿರೂಪಿಸಲು ಮುಂಗಡವಾಗಿ ನೀಡಿದ ಹಣವನ್ನು ಅವರಿಗೆ ಹಿಂತಿರುಗಿಸಿದ್ದೇನೆ ಎಂದು ಚೈತ್ರಾ ಹೇಳಿದ್ದಾರೆ.
ಸದ್ಯ ಚೈತ್ರಾ ವಾಸುದೇವನ್ ‘ಕುಕ್ಕು ವಿದ್ ಕಿರುಕ್ಕು ಶೋ’ನ ಭಾಗವಾಗಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss