Sunday, August 14, 2022

Latest Posts

“ನಾನು ಒಬ್ಬ ಅಪ್ಪ-ಅಮ್ಮಂಗೆ ಹುಟ್ಟಿದೀನಿ, ಸರಿಯಾಗಿರ್ತೀನಿ”: ಬಿಗ್ ಬಾಸ್’ ಮನೆಯಲ್ಲಿ ಕುಚಿಕೂ ಗೆಳೆಯರ ಮಹಾಯುದ್ಧ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಭಾರತೀನಗರ:

ಬಿಗ್ ಬಾಸ್ ಕನ್ನಡ ಸೀಸನ್ 8 ಕಾರ್ಯಕ್ರಮದಲ್ಲಿ ಕಿಚಿಕು ಗೆಳಯರಂತಿದ್ದ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ಸೇಹದಲ್ಲಿ ಮತ್ತೆ ಬಿರುಕು ಕಾಣಿಸಿದೆ. ಇಬ್ಬರ ನಡುವೆ ಮಹಾ ಕದನ ನಡೆದಿದೆ.

“ಬಿಗ್​ ಬಾಸ್​ ಮನೆಯಲ್ಲಿ ಉಳಿದವರೆಲ್ಲರೂ ಒಂದು. ನಾವಿಬ್ಬರೇ ಬೇರೆ. ನಿನ್ನ ಅಡ್ವೈಸ್​ಗಳನ್ನು ಎಲ್ಲರೂ ಹೇಳಿಕೊಂಡು ನಗುತ್ತಾರೆ ವೈಷ್ಣವಿಗೆ ನೀನು ಕೊಟ್ಟಿರುವ ಸಲಹೆಯನ್ನು ಅವರು ಗೇಲಿ ಮಾಡಿದ್ದಾರೆ ಎಂದು  ಚಕ್ರವರ್ತಿ ಚಂದ್ರಚೂಡ್ ಪ್ರಶಾಂತ್ ಅವರಲ್ಲಿ  ಹೇಳುತ್ತಾರೆ.

ಪ್ರಶಾಂತ್ ಈ ಬಗ್ಗೆ ವೈಷ್ಣವಿಯವರಲ್ಲಿಯೇ ಕೇಳಿ ಸ್ಪಷ್ಟನೆ ಪಡೆದುಕೊಂಡರು. ಈ ವಿಚಾರಕ್ಕಾಗಿ ಚಕ್ರವರ್ತಿ ಕೋಪ ಮಾಡಿಕೊಂಡರು. ಇಬ್ಬರ ನಡುವೆ ಜಗಳ ತಾರಕಕ್ಕೇರಿತ್ತು.

“ತಾಯಿ ಮೇಲೆ ಆಣೆ ಮಾಡುತ್ತೇನೆ. ಎದೆಯಲ್ಲಿ ಒಂದು ಇಟ್ಟುಕೊಂಡು ಅದನ್ನೇ ಉಳಿಸಿಕೊಳ್ಳೋ ತಾಕತ್ತು ಇಲ್ಲ, ಎಲ್ಲ ಬೇಡದಿರುವ ಕೆಲಸ ಮಾಡಿದೆ, ಏನು ಸ್ಪಷ್ಟನೆ ತಗೊಂಡೆ, ನಾನು ಒಬ್ಬ ಅಪ್ಪ-ಅಮ್ಮಂಗೆ ಹುಟ್ಟಿದೀನಿ, ಸರಿಯಾಗಿರ್ತೀನಿ. ನೀನು  ಮುಂದೊಂದು ಹಿಂದೊಂದು ಮಾಡುತ್ತೀಯಾ” ಎಂದು ಚಕ್ರವರ್ತಿ ಚಂದ್ರಚೂಡ್ ಅವರು ಪ್ರಶಾಂತ್‌ಗೆ ಹೇಳಿದ್ದಾರೆ. ಕೆಲ ಸಮಯಗಳ ಕಾಲ ಇಬ್ಬರು ನಡುವೆ ಬಳಕೆ ಆದ ಶಬ್ದಗಳಿಗೆ ಬಿಗ್​ ಬಾಸ್​ ಬೀಪ್​ ಹಾಕಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss