Monday, August 15, 2022

Latest Posts

ಶಮಂತ್ ಮೇಲೆ ಸಿಡಿದುಬಿದ್ದ ಚಕ್ರವರ್ತಿ: ಇಂದು ದ್ರೋಹ ಮಾಡಿದ ಗೆಳೆಯರ ಪೋಸ್ಟರ್ ಬಿಡುಗಡೆ ಮಾಡ್ತಾರಂತೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಿಗ್ ಬಾಸ್ ಮನೆಯಲ್ಲಿ ಮೊದಲಿನಿಂದಲೂ ಶಮಂತ್ ಹಾಗೂ ಚಕ್ರವರ್ತಿ ಚಂದ್ರಚೂಡ್ ಫ್ರೆಂಡ್ ಶಿಪ್ ಚೆನ್ನಾಗಿಯೇ ಇತ್ತು. ಆದರೆ ಇದೀಗ ಕಳಪೆ ಹಾಗೂ ಅತ್ಯುತ್ತಮ ಆಟಗಾರ ವಿಚಾರವಾಗಿ ಇಬ್ಬರ ನಡುವೆ ಜೋರು ಗಲಾಟೆ ನಡೆದಿದೆ.

ಬಿಗ್ ಬಾಸ್ ನೀಡಿದ 10 ಡ್ರೆಸ್ ಗಳನ್ನು ಹಾಕಿಕೊಳ್ಳುವ ಟಾಸ್ಕ್ ನಲ್ಲಿ ಶಮಂತ್ ಹಾಗೂ ದಿವ್ಯಾ ಸುರೇಶ್ ಒಂದೇ ಬಣ್ಣದ ಬಟ್ಟೆ ತೊಟ್ಟು ಟ್ರೆಂಡ್ ಮಾಡುತ್ತಿದ್ದರು. ಈ ವೇಳೆ ಚಂದ್ರಚೂಡ್ ಶಮಂತ್ ಎರಡು ದೋಣಿ ಮೇಲೆ ಕಾಲಿಡುತ್ತಾನೆ ಎಂದು ವ್ಯಂಗ್ಯ ಮಾಡಿದ್ದರು. ಈ ವಿಚಾರವಾಗಿ ಬೇಸರಗೊಂಡ ಶಮಂತ್ ಚಕ್ರವರ್ತಿಗೆ ಕಳಪೆ ಪಟ್ಟ ಕೊಟ್ಟಿದ್ದೇ ಈ ಗಲಾಟೆಗೆ ಕಾರಣವಾಗಿದೆ.

ಕಳಪೆ ಪಟ್ಟ ಪಡೆದು ಜೈಲುವಾಸದಲ್ಲಿರುವ ಚಕ್ರವರ್ತಿ ಸಿಟ್ಟಿನಲ್ಲಿ ನೀನು ಸ್ನೇಹಿತರ ಕತ್ತು ಕುಯ್ಯುತ್ತೀಯಾ ಎಂದು ಕೂಗಾಡಿದ್ದಾರೆ. ನನ್ನ ಬಗ್ಗೆ ಗೊತ್ತಿಲ್ಲದೆ ಸುಮ್ಮನೆ ತಪ್ಪು ಹೇಳಿಕೆಗಳನ್ನು ಕೊಡಬೇಡಿ. ಇಲ್ಲ ಸಲ್ಲದ ಅಭಿಪ್ರಾಯ ಹುಟ್ಟುಹಾಕಬೇಡಿ ಎಂದು ಶಮಂತ್ ವಾರ್ನಿಂಗ್ ಕೊಟ್ಟಿದ್ದಾರೆ.

ಚಕ್ರವರ್ತಿ ಜೈಲಿನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಪ್ರೋಮೋ ಬಿಡುಗಡೆಯಾಗಿದ್ದು, ಇಂದು ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಚಕ್ರವರ್ತಿಗೆ ಅತ್ಯುತ್ತಮ ಉಡುಗೊರೆ ನೀಡಲಿದ್ದಾರಾ? ಕಾದು ನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss