ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, June 12, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚಾಮರಾಜನಗರ ಪ್ರಕರಣ: ಎಲ್ಲಾ ಸಾವುಗಳೂ ಆಕ್ಸಿಜನ್ ಕೊರತೆಯಿಂದ ಸಂಭವಿಸಿದ್ದಲ್ಲ ಎಂದ ಸುರೇಶ್ ಕುಮಾರ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸುರೇಶ್​ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆ ಕಳೆದ ವರ್ಷ ದಕ್ಷಿಣ ಭಾರತದಲ್ಲೇ ಜೀರೋ ಕೇಸ್​ ಹೊಂದಿತ್ತು, ಹಸಿರು ವಲಯದಲ್ಲಿದ್ದ ಜಿಲ್ಲೆ ಎಂದು ಹೇಳಿದರು.
ಇವತ್ತು ವಿಚಿತ್ರವಾದ ವೇದನೆಯ ಸನ್ನಿವೇಶ, ನಿನ್ನೆ ಬೆಳಗ್ಗೆ 7 ರಿಂದ ಇಂದು ಬೆಳಗ್ಗೆ 7 ಗಂಟೆವರೆಗೂ 24 ಕೋವಿಡ್ ಸಂಬಂಧಿತ ಸಾವುಗಳು ಸಂಭವಿಸಿವೆ. ಪ್ರತಿಯೊಂದು ಸಾವು ಕೂಡ ನೋವು ತರುವಂಥದ್ದೇ. 24 ಸಾವುಗಳು ಆಮ್ಲಜನಕದ ಕೊರತೆಯಿಂದ ಆಗಿದೆ ಅಂತ ಚರ್ಚೆಯಾಗ್ತಿದೆ. ಸುಧಾಕರ್ ಅವರು 24 ಜನರ ಬಗ್ಗೆಯೂ ವಿವರಗಳನ್ನ ಪಡೆದಿದ್ದಾರೆ. ಆಸ್ಪತ್ರೆಯ ಆಕ್ಸಿಜನ್ ಪೂರೈಕೆ ಬಗ್ಗೆಯೂ ಮಾಹಿತಿ ಪಡೆದಿದ್ದೇವೆ.
ಎಲ್ಲಾ ಸಾವುಗಳೂ ಆಕ್ಸಿಜನ್ ಕೊರತೆಯಿಂದ ಸಂಭವಿಸಿದ್ದಲ್ಲ. ಕೆಲವು ಆರೋಗ್ಯ ಗಂಭೀರವಾದಾಗ ಸೇರಿದ ಸನ್ನಿವೇಶ ಇದೆ. ರಾಜ್ಯ ಸರ್ಕಾರ ಇದರ ಬಗ್ಗೆ ವಿಚಾರಣೆ ನಡೆಸಿ ತನಿಖಾ ವರದಿಯನ್ನ 3 ದಿನದ ಒಳಗೆ ಸಲ್ಲಿಸುವಂತೆ ಆದೇಶ ಮಾಡಿದೆ. ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಕಳಸದ್ ಅವರನ್ನ ವಿಚಾರಣಾಧಿಕಾರಿಯಾಗಿ ನೇಮಿಸಿದೆ.
ಆಸ್ಪತ್ರೆಗೆ ಬರುವ ಪ್ರತಿಯೊಬ್ಬರೂ ಗುಣಮುಖರಾಗಬೇಕು. ಯಾವ ಸಾವೂ ಸಂಭವಿಸಬಾರ್ದು ಅದಕ್ಕಾಗಿ ಎಲ್ಲ ಪ್ರಯತ್ನಗಳನ್ನೂ ನಾವು ಮಾಡ್ತಿದ್ದೇವೆ. ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡ್ತಿದ್ದಾರೆ ಆದರೂ ದುರಂತ ಸಂಭವಿಸಿದೆ. ಇದಕ್ಕೆ ನಾವೆಲ್ಲರೂ ವಿಷಾದ ವ್ಯಕ್ತಪಡಿಸ್ತೇವೆ. ಇದು ಆಗ್ಬಾರ್ದಿತ್ತು.. ಮತ್ತೆ ಮರು ಕಳಿಸಬಾರ್ದು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss