Monday, June 27, 2022

Latest Posts

ಕನ್ನಡ ಧ್ವಜಕ್ಕೆ ಅವಮಾನ: ಎಂಇಎಸ್‌ ಪುಂಡರ ವಿರುದ್ಧ ಚಂದನವನ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜವನ್ನು ಸುಟ್ಟು ಹಾಕಿರುವ ಎಂಇಎಸ್‌ ಪುಂಡರ ವಿರುದ್ಧ ಚಂದನವನ ಕಿಡಿ ಕಾರಿದೆ.
​ನಟ ಶಿವರಾಜ್​ಕುಮಾರ್, ಜಗ್ಗೇಶ್​, ದರ್ಶನ್​, ಗಣೇಶ್​, ದುನಿಯಾ ವಿಜಯ್​, ಪ್ರಜ್ವಲ್​ ದೇವರಾಜ್​, ವಿನೋದ್​ ಪ್ರಭಾಕರ್, ದ್ರುವ ಸರ್ಜಾ ಹಾಗೂ​ ನಟಿ ಮೇಘನಾ ಗಾವ್ಕಂರ್ ಸೇರಿದಂತೆ ಹಲವರು ಟ್ವೀಟ್​ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅಗ್ರಹಿಸಿದ್ದಾರೆ.
ಮಹಾರಾಷ್ಟ್ರ ಏಕೀಕರಣ ಸಮಿತಿ (MES) ತೋರಿದ ದುರ್ವರ್ತನೆಗೆ ಕನ್ನಡದ ಸ್ಟಾರ್​ ನಟರು ಕಿಡಿಕಾರಿದ್ದು, ಟ್ವೀಟ್​ ಮಾಡಿ ಆಕ್ರೋಶ ಹೊರಹಾಕಿರುವ ಅವರು ರಾಜ್ಯ ಸರ್ಕಾರ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.
ಶಿವರಾಜ್​ ಕುಮಾರ್ ಟ್ವೀಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ. ಜೈ ಕರ್ನಾಟಕ ಎಂದು ಹೇಳಿದ್ದಾರೆ.
ನಟ ದರ್ಶನ್ ಫೇಸ್ ಬುಕ್ ಖಾತೆಯಲ್ಲಿ ಅಸಮಾಧಾನ ಹೊರಹಾಕಿದ್ದು, ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ಬರೆದುಕೊಂಡಿದ್ದಾರೆ.
ನಟ ದ್ರುವ ಸರ್ಜಾ ಟ್ವೀಟ್​ ಮಾಡಿದ್ದು, ಭಾಷೆ ಎನ್ನುವುದು ಒಂದು ನಾಡಿನ ಸ್ವಾಭಿಮಾನದ ಪ್ರತೀಕ. ಕನ್ನಡ ಧ್ವಜ ನಮ್ಮ ಸಂಸ್ಕೃತಿಯ ತಿಲಕ. ಕನ್ನಡಧ್ವಜವನ್ನು ಸುಟ್ಟಿದ್ದು ತೀವ್ರ ಬೇಸರ ತರಿಸಿದೆ. ಸರ್ಕಾರ ಈ ಕೂಡಲೇ ಇಂತಹ ನಾಡದ್ರೋಹಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕನ್ನಡಿಗರ ಸ್ವಾಭಿಮಾನವನ್ನು ರಕ್ಷಿಸಬೇಕು ಎಂದಿದ್ದಾರೆ.
ನಿರ್ದೇಶಕ ಆನಂದ್​ ರಾಮ್​ ಕೂಡ ಟ್ವೀಟ್​ ಮಾಡಿ ಎಂಇಎಸ್‌ ಪುಂಡರ ವಿರುದ್ಧ ಕಿಡಿ ಕಾರಿದ್ದಾರೆ. ನಮ್ಮ ಭಾಷೆ, ನಾಡು, ನೀರಿನ ಪರ ಧ್ವನಿಯಾಗಿರುವುದು​ ನಮ್ಮ ಕರ್ತವ್ಯ. ಬೆಳಗಾವಿ ಕರ್ನಾಟಕದ ಕಳಶ ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss