ಕೆನಡಾ ಸಂಸತ್‌ ನಲ್ಲಿ ಕನ್ನಡದಲ್ಲಿ ಮಾತನಾಡಿದ ಸಂಸದ ಚಂದ್ರ ಆರ್ಯ; ಮೆಚ್ಚುಗೆ ಸೂಚಿಸಿದ ಡಾ.ಸುಧಾಕರ್‌

ಹೊಸದಿಗಂತ ವರದಿ, ಚಿಕ್ಕಬಳ್ಳಾಪುರ:
ಕೆನಾಡದ ಸಂಸತ್ ಸದಸ್ಯನಾಗಿ ಆಯ್ಕೆಯಾದ ಆರ್ಯ ಎಂಬುವರು ಸಂಸತ್ತಿನಲ್ಲಿ ಕನ್ನಡದಲ್ಲಿ ಪ್ರಮಾಣವಚನ ಪಡೆದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿದೆ.
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಧ್ವಾರಾಳು ಗ್ರಾಮದ ಆರ್ಯ ಎಂಬುವರು ಕೆನಡಾ ದೇಶದಲ್ಲಿ ನೂತನವಾಗಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿದ್ದಾರೆ. ಅವರು ಸಂಸತ್ತಿನಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಷ್ಟ್ರಕವಿ ಕುವೆಂಪು ಅವರ ಎಲ್ಲಾದರು ಇರು ಎಂತಾದರು ಇರು ನಿ ಕನ್ನಡವಾಗಿರು ಎಂಬ ಸಾಲುಗಳೊಂದಿಗೆ ಆರು ಕೋಟಿ ಕನ್ನಡಿಗರ ಪರವಾಗಿ ಆರ್ಯ ಅವರು ಕೆನಡಾ ದೇಶದ ನೂತನ ಸಂಸತ್ ಸದಸ್ಯನಾಗಿ ಪ್ರಮಾಣ ವಚನ ಸ್ವಿಕರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ಈ ವಿಡಿಯೋ ಲಿಂಕ್‌ ಹಂಚಿಕೊಂಡು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕನ್ನಡಕ್ಕೆ ಇದೊಂದು ಹೆಮ್ಮೆಯ ಕ್ಷಣ, ಕನ್ನಡ ಕಸ್ತೂರಿಯ ಕಂಪು ವಿದೇಶದಲ್ಲಿಯೂ ಪಸರಿಸಿದ ಆನಂದವಾಗಿದೆ.
ಕೆನಡಾ ಸಂಸತ್ತಿನಲ್ಲಿ ನಮ್ಮ ಮಾತೃಭಾಷೆ ಮೊದಲ ಬಾರಿಗೆ ಪ್ರತಿಧ್ವನಿಸಿರುವುದು ಸಂತಸ ತಂದಿದೆ. ಅಲ್ಲದೆ ಕನ್ನಡದ ಮೇಲಿನ ಅಭಿಮಾನಕ್ಕೆ @AryaCanada ಅವರನ್ನು ಅಭಿನಂದಿಸಲೇಬೇಕು ಎಂದು ಬಣ್ಣಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!