ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
2019ರಲ್ಲಿ ಚಂದ್ರನ ಅಧ್ಯಯನಕ್ಕೆಂದು ಉಡಾವಣೆ ಮಾಡಲಾಗಿದ್ದ ಚಂದ್ರಯಾನ-2 ನೌಕೆಯು ಎರಡು ವರ್ಷದಲ್ಲಿ 9000ಕ್ಕೂ ಹೆಚ್ಚು ಬಾರಿ ಚಂದ್ರನನ್ನು ಸುತ್ತುಹಾಕಿದ್ದು, ಕ್ರೋಮಿಯಂ ಮತ್ತು ಮ್ಯಾಂಗನೀಸ್ ಸಣ್ಣ ಅಂಶಗಳನ್ನು ಪತ್ತೆ ಮಾಡಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಚಂದ್ರಯಾನ-2ಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆ, ಎರಡು ದಿನಗಳ ಕಾಲ ನಡೆದ ‘ಲೂನಾರ್ ಸೈನ್ಸ್’ ಕಾರ್ಯಾಗಾರದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ. ಶಿವನ್ , ಚಂದ್ರಯಾನ-2ನೌಕೆಯೊಂದಿಗೆ ಹಾರಿಬಿಡಲಾಗಿರುವ 8 ವಿವಿಧ ಉಪಕರಣಗಳು ರಿಮೋಟ್ ಸೆನ್ಸಿಂಗ್, ಇನ್ ಸೈಟ್ ಅಬ್ಸರ್ವೇಷನ್ ಸೇರಿ ಅನೇಕ ಕೆಲಸಗಳನ್ನು ಮಾಡುತ್ತಲೇ ಇದೆ. ಚಂದ್ರಯಾನ -2 ಸಂಗ್ರಹಿಸಿದ ಡೇಟಾ “ರಾಷ್ಟ್ರೀಯ ಆಸ್ತಿ” ಎಂದು ಹೇಳಿದರು.
ಚಂದ್ರಯಾನ-2 ಯೋಜನೆ ಚಂದ್ರನ ಮೇಲ್ಮೈ ಮೇಲೆ ಇಳಿಯುವಾಗ ವಿಫಲವಾದರೂ ಸಹ ಚಂದ್ರನ ಕಕ್ಷೆಯನ್ನು ಸುತ್ತುತ್ತಿರುವ ಕೆಲವು ಉಪಕರಣಗಳಿಂದ ಚಂದ್ರನ ಮೇಲ್ಮೈ ಪರಿಶೀಲನೆ ನಡೆಯುತ್ತಿದೆ.