ಬೆಳಿಗ್ಗೆ ತಿಂಡಿಗೆ ಮಾಡಿಕೊಂಡ ಚಪಾತಿ ಹೆಚ್ಚಾದರೆ ಏನು ಮಾಡುವುದು ಎಂಬ ಚಿಂತೆಯಾಗುತ್ತದೆ. ಇನ್ನು ಮುಂದೆ ಚಿಂತಿಸುವುದು ಬೇಡ. ಏಕೆಂದರೆ ಚಪಾತಿಯಿಂದ ರುಚಿಯಾದ ಉಪ್ಪಿಟ್ಟು ತಯಾರಿಸಬಹುದು. ಈ ಉಪ್ಪಿಟ್ಟನ್ನು ಮದ್ಯಾಹ್ನ ಟೀ ಜೊತೆಗೂ ಸೇವಿಸಬಹುದು. ಉಪ್ಪಿಟ್ಟು ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ ಓದಿ.
ಬೇಕಾಗು ಪದಾರ್ಥಗಳು:
ಚಪಾತಿ
ಈರುಳ್ಳಿ
ಟೊಮಾಟೊ
ಹಸಿ ಮೆಣಸು
ಅರಿಶಿಣ
ಕರಿ ಬೇವು
ಲಿಂಬು
ಎಣ್ಣೆ
ಸಾಸಿವೆ
ಇಂಗು
ಕೊತುಂಬರಿ ಸೊಪ್ಪು
ಉಪ್ಪು
ಸಕ್ಕರೆ
ಮಾಡುವ ವಿಧಾನ:
ಚಪಾತಿಯನ್ನು ಚಿಕ್ಕ-ಚಿಕ್ಕ ಪೀಸ್ ಮಾಡಿ ಕೊಳ್ಳಬೇಕು. ನಂತರ ಅದಕ್ಕೆ ಒಗ್ಗರಣೆ ಹಾಕಬೇಕು. ಮೊದಲಿಗೆ ಎಣ್ಣೆ ಹಾಕಿಕೊಂಡು ಅದಕ್ಕೆ ಈರುಳ್ಳಿ, ಟೊಮಾಟೊ, ಸಾಸಿವೆ, ಹಸಿ ಮೆಣಸು, ಬೇವಿನ ಸೊಪ್ಪು, ಅರಿಶಿಣ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು. ನಂತರ ಪೀಸ್ ಮಾಡಿಕೊಂಡ ಚಪಾತಿಯನ್ನು ಹಾಕಿ. ಆಮೇಲೆ ಕುತುಂಬರಿ ಸೊಪ್ಪು, ಉಪ್ಪು, ಸಕ್ಕರೆ, ಲಿಂಬು ಹಾಕಿ ಚೆನ್ನಾಗಿ ಬಿಸಿ ಮಾಡಬೇಕು. ಹೀಗೆ ಮಾಡಿದರೆ ರುಚಿಯಾದ ಚಪಾತಿ ಉಪ್ಪಿಟ್ಟು ರೆಡಿ. ಇದನ್ನು ಬೆಳ್ಳಿಗ್ಗೆ ತಿಂಡಿಯಾಗಿಯೂ ಸೇವಿಸಬಹುದು. ಮದ್ಯಾಹ್ನ ಟೀ ಜೊತೆಯೂ ಸೇವಿಸಬಹುದು.