Sunday, December 3, 2023

Latest Posts

ಚಾರ್​ಧಾಮ್​ ಯಾತ್ರೆ: ಮೃತ ಯಾತ್ರಿಕರ ಸಂಖ್ಯೆ 91ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಸಿದ್ಧ ಚಾರ್​ಧಾಮ್​ ಯಾತ್ರೆಯಲ್ಲಿ ಮೇ 3ರಿಂದ ಇದುವರೆಗೆ 91 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಬಹುಪಾಲು ಜನರು ಯಾತ್ರೆ ಸಂದರ್ಭದಲ್ಲಿ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ.
ಕೊರೋನಾ ಹಾವಳಿಯ ಎರಡು ವರ್ಷಗಳ ನಂತರ ಯಾತ್ರಿಕರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಯವರೆಗೆ 11.50 ಲಕ್ಷ ಜನರು ಚಾರ್​ಧಾಮ್​​ಗೆ ಭೇಟಿ ನೀಡಿದ್ದಾರೆ. ಇದರಲ್ಲಿ 91 ಮಂದಿ ಯಾತ್ರಿಕರು ಸಾವನ್ನಪ್ಪಿದ್ದಾರೆ. ಈ ಪೈಕಿ ಕೇದಾರನಾಥದಲ್ಲಿ 44, ಬದರಿನಾಥದಲ್ಲಿ 17, ಯಮುನೋತ್ರಿಯಲ್ಲಿ 24 ಮತ್ತು ಗಂಗೋತ್ರಿಯಲ್ಲಿ 6 ಜನ ಭಕ್ತರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತರಲ್ಲಿ ಹೆಚ್ಚಿನ ಯಾತ್ರಿಕರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಾಲ್ಕು ಧಾಮ್​ಗಳಲ್ಲಿ 169ಕ್ಕೂ ಹೆಚ್ಚು ವೈದ್ಯರನ್ನು ನಿಯೋಜಿಸಲಾಗಿದೆ. ಯಾತ್ರೆ ಬರುವವರಿಗೆ ಆರೋಗ್ಯ ಸೇವೆಗಳನ್ನು ಹೆಚ್ಚಿಸಲಾಗಿದೆ ಎಂದು ಉತ್ತರಾಖಂಡದ ಆರೋಗ್ಯ ಇಲಾಖೆಯ ಮಹಾ ನಿರ್ದೇಶಕಿ ಶೈಲಜಾ ಭಟ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!