ಚಾರ್‌ಧಾಮ್‌ ಯಾತ್ರೆ : ಎರಡು ತಿಂಗಳಲ್ಲಿ ಪ್ರಾಣಬಿಟ್ಟವರು 203 ಮಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
ಉತ್ತರಾಖಂಡ ಸರ್ಕಾರದ ತುರ್ತು ಕಾರ್ಯಾಚರಣೆ ಕೇಂದ್ರವು ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಈ ಕಳೆದ ಎರಡು ತಿಂಗಳ ಚಾರ್‌ ಧಾಮ್‌ ಯಾತ್ರೆಯಲ್ಲಿ 203 ಯಾತ್ರಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ. ಮೇ 3 ರಂದು ಚಾರ್‌ ಧಾಮ್‌ ಯಾತ್ರೆ ಪ್ರಾರಂಭವಾದಾಗಿಂದ ಇಲ್ಲಿಯವರೆಗೆ ಒಟ್ಟೂ 203 ಮಂದಿ ಬಲಿಯಾಗಿದ್ದು ಹೆಚ್ಚಿನ ಜನರು ಹೃಧಯ ಸ್ತಂಭನ ಮತ್ತು ಇತರ ಖಾಯಿಲೆಗಳಿಗೆ ಸಾವನ್ನಪ್ಪಿದ್ದಾರೆ.

203 ಯಾತ್ರಾರ್ಥಿಗಳ ಪೈಕಿ 97 ಯಾತ್ರಾರ್ಥಿಗಳು ಕೇದಾರನಾಥ ಯಾತ್ರೆ ಮಾರ್ಗದಲ್ಲಿ, 51 ಮಂದಿ ಬದರಿನಾಥ ಧಾಮದಲ್ಲಿ, 13 ಮಂದಿ ಗಂಗೋತ್ರಿಯಲ್ಲಿ ಮತ್ತು 42 ಮಂದಿ ಯಮುನೋತ್ರಿಯಲ್ಲಿ ಸಾವನ್ನಪ್ಪಿದ್ದಾರೆ.

ಅಂಕಿಅಂಶಗಳ ಪ್ರಕಾರ, ಮೇ 3 ರಿಂದ ಚಾರ್ ಧಾಮ್‌ಗಳಿಗೆ ಭೇಟಿ ನೀಡಿದ ಯಾತ್ರಾರ್ಥಿಗಳ ಸಂಖ್ಯೆ 25 ಲಕ್ಷದ ಗಡಿ ದಾಟಿದೆ. ಆದರೆ, ಕಳೆದೊಂದು ವಾರದಿಂದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.

ಈ ವರ್ಷ ಪ್ರತಿಕೂಲ ಹವಾಮಾನದಿದಾಗಿ ಚಾರ್ ಧಾಮ್ ಯಾತ್ರೆಗೆ ಬರುವ ಯಾತ್ರಾರ್ಥಿಗಳು ಚಾರಣ ಪ್ರಾರಂಭಿಸಿಸುವ ಮೊದಲು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ಆಮೇಲೆ ಯಾತ್ರೆ ಕೈಗೊಳ್ಳುವಂತೆ ಉತ್ತರಾಖಂಡ ಸರ್ಕಾರವು ಸಲಹೆಯನ್ನು ನೀಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!