ಟಿಎಂಸಿ ನಾಯಕ ಶಹಜಹಾನ್‌ ಶೇಖ್ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಟಿಎಂಸಿ ನಾಯಕ, ಪಶ್ಚಿಮ ಬಂಗಾಳದ ಶಹಜಹಾನ್‌ ಶೇಖ್, ಆತನ ಸಹೋದರ ಹಾಗೂ ಇಬ್ಬರು ಸಹಚರರ ವಿರುದ್ಧ ಮೊದಲ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇ.ಡಿ) ಗುರುವಾರ ತಿಳಿಸಿದೆ.

ಶಹಜಹಾನ್‌ ಶೇಖ್‌ ಸಹೋದರ ಶೇಖ್‌ ಆಲಂಗಿರ್ ಹಾಗೂ ಶಿವಪ್ರಸಾದ್ ಹಜ್ರಾ ಮತ್ತು ದೀದಾರ್ ಬಕ್ಷ್‌ ಮೊಲ್ಲ ಎಂಬುವವರ ಹೆಸರುಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.ಕೋಲ್ಕತ್ತದಲ್ಲಿರುವ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಇ.ಡಿ ಆರೋಪ ಪಟ್ಟಿ ಸಲ್ಲಿಸಿದೆ.

‘ಶಹಜಹಾನ್‌, ಭೂಕಬಳಿಕೆ, ಅಕ್ರಮ ಮೀನುಗಾರಿಕೆ/ವ್ಯಾಪಾರ ಸೇರಿದಂತೆ ಕ್ರಿಮಿನಲ್‌ ಸಾಮ್ರಾಜ್ಯ ನಿರ್ಮಿಸಿದ್ದಾನೆ. ಈ ಅಕ್ರಮಗಳ ಜೊತೆಗೆ, ಇಟ್ಟಿಗೆ ತಯಾರಿಸುವ ಪ್ರದೇಶಗಳ ಕಬಳಿಕೆ, ಗುತ್ತಿಗೆಗಳನ್ನು ನಿಯಂತ್ರಿಸುವ ಕೂಟ ರಚನೆ, ಕಾನೂನುಬಾಹಿರ ತೆರಿಗೆ ಸಂಗ್ರಹ, ಜಮೀನುಗಳ ಪರಭಾರೆಯಲ್ಲಿ ಕಮಿಷನ್‌ ಪಡೆಯುವಂತಹ ಚಟುವಟಿಕೆಗಳ ಸುತ್ತಲೇ ಈ ಕ್ರಿಮಿನಲ್‌ ಸಾಮ್ರಾಜ್ಯ ಗಿರಕಿ ಹೊಡೆಯುತ್ತದೆ’ ಎಂದು ಆರೋಪಪಟ್ಟಿಯಲ್ಲಿ ಇ.ಡಿ ಆರೋಪಿಸಿದೆ.

ಬೇರೆ ಪ್ರಕರಣಗಳಿಗೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಸಿಬಿಐ ಕೂಡ, ಶೇಖ್‌ ಹಾಗೂ ಇತರರ ವಿರುದ್ಧ ಇದೇ ವಾರ ಆರೋಪ ಪಟ್ಟಿ ಸಲ್ಲಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!