ಆರು ಮರಿಗಳಿಗೆ ಜನ್ಮ ನೀಡಿದ ‘ಚಾರ್ಲಿ’: ಖುಷಿ ಹಂಚಿಕೊಂಡ ರಕ್ಷಿತ್​ ಶೆಟ್ಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ರಕ್ಷಿತ್ ಶೆಟ್ಟಿ ಸಡನ್​ ಆಗಿ ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದು, ಗುಡ್​ ನ್ಯೂಸ್​ ಹಂಚಿಕೊಂಡಿದ್ದಾರೆ.

ಅಂದಹಾಗೆ, ಈ ಖುಷಿಯ ಸಮಾಚಾರ ಚಾರ್ಲಿ ಶ್ವಾನಕ್ಕೆ ಸಂಬಂಧಿಸಿದ್ದು. ‘777 ಚಾರ್ಲಿ’ (777 Charlie) ಸಿನಿಮಾದಲ್ಲಿ ನಟಿಸಿದ ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದೆ.

ಚಾರ್ಲಿ (777 Charlie Dog) ಮತ್ತು ಅದರ ಮರಿಗಳನ್ನು ನೋಡಲು ರಕ್ಷಿತ್​ ಶೆಟ್ಟಿ ಅವರು ಮೈಸೂರಿಗೆ ತೆರಳಿದ್ದಾರೆ. ಅಲ್ಲಿಂದ ಅವರು ಬಹಳ ಖುಷಿಯಲ್ಲಿ ಲೈವ್​ ಬಂದಿದ್ದಾರೆ.

2022ರ ಜೂನ್​ 10ರಂದು ‘777 ಚಾರ್ಲಿ’ ಸಿನಿಮಾ ಬಿಡುಗಡೆ ಆಗಿತ್ತು. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ಈ ಸಿನಿಮಾ ತೆರೆಕಂಡು ಜನಮೆಚ್ಚುಗೆ ಗಳಿಸಿತ್ತು. ಸಿನಿಮಾದ ಗೆಲುವಿನಲ್ಲಿ ಚಾರ್ಲಿ ಮುಖ್ಯ ಪಾತ್ರ ವಹಿಸಿತ್ತು. ಚಾರ್ಲಿಯ ನಟನೆಗೆ ಶ್ವಾನಪ್ರಿಯರು ಮೆಚ್ಚುಗೆ ಸೂಚಿಸಿದ್ದರು. ಸಿ

‘ಲೈವ್​ ಬರಲು ಒಂದು ಕಾರಣ ಇದೆ. 777 ಚಾರ್ಲಿ ಸಿನಿಮಾ ಬಿಡುಗಡೆ ಆಗಿ ಬಹುತೇಕ 2 ವರ್ಷ ಆಗುತ್ತಾ ಬಂತು. ಸಿನಿಮಾ ಬಿಡುಗಡೆ ಆಗಿ ಇಷ್ಟು ಸಮಯ ಆದರೂ ನಮ್ಮ ಮನದಲ್ಲಿ ಒಂದು ವಿಚಾರ ಇತ್ತು. ಒಂದು ವೇಳೆ ಚಾರ್ಲಿ ತಾಯಿಯಾದರೆ ಈ ಜರ್ನಿಗೆ ಒಂದು ಸರ್ಕಲ್​ ಪೂರ್ಣ ಆಗತ್ತೆ. ಅದನ್ನು ಕಿರಣ್​ ರಾಜ್​ ಅವರು ಮೊದಲೇ ಹೇಳಿದ್ದರು. ಅದನ್ನು ಕೇಳಿದ ಬಳಿಕ ಚಾರ್ಲಿ ತಾಯಿ ಆಗಬೇಕು ಅಂತ ನಾನು ಕೂಡ ಕಾದಿದ್ದೆ. ಅದರ ಬಗ್ಗೆ ನಾನು ವಿಚಾರಿಸುತ್ತಲೇ ಇದ್ದೆ’ ಎಂದು ರಕ್ಷಿತ್​ ಶೆಟ್ಟಿ ಹೇಳಿದ್ದಾರೆ.

‘ಪ್ರಮೋದ್​ ಜೊತೆ ಚಾರ್ಲಿ ಇರುತ್ತದೆ. ಅವರಿಗೆ ಕಾಲ್​ ಮಾಡಿದಾಗಲೆಲ್ಲ ಚಾರ್ಲಿ ತಾಯಿ ಆಗುವ ಸಾಧ್ಯತೆ ಬಗ್ಗೆ ಕೇಳುತ್ತಿದ್ದೆ. ಅದಕ್ಕೆ ವಯಸ್ಸು ಆಗಿದ್ದರಿಂದ ಏನಾಗತ್ತೋ ಗೊತ್ತಿಲ್ಲ ಅಂತ ಅವರು ಹೇಳುತ್ತಿದ್ದರು. ಅಚ್ಚರಿ ಏನೆಂದರೆ ಮೇ 9ರಂದು ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದೆ. ಹಾಗಾಗಿ ಚಾರ್ಲಿ ಮತ್ತು ಅದರ ಮರಿಗಳನ್ನು ನೋಡಲು ನಾನು ಮೈಸೂರಿಗೆ ಬಂದೆ’ ಎಂದಿದ್ದಾರೆ ರಕ್ಷಿತ್​ ಶೆಟ್ಟಿ.

ಇನ್​ಸ್ಟಾಗ್ರಾಮ್​ ಲೈವ್​ನಲ್ಲಿ ರಕ್ಷಿತ್​ ಶೆಟ್ಟಿ ಅವರು ಚಾರ್ಲಿ ಮತ್ತು ಅದರ ಮರಿಗಳನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!