ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಲವರ್ ಬೇರೆ ಹುಡುಗಿ ಜೊತೆ ಚಾಟಿಂಗ್ ಮಾಡ್ತಾನೆ ಎಂದು ಮನನೊಂದು 17 ವರ್ಷದ ಬಾಲಕಿ ನೇಣಿಗೆ ಶರಣಾದ ಘಟನೆ ಮಂಚೇನಹಳ್ಳಿ ತಾಲೂಕಿನ ಸಾದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪ್ರಿಯಕರ ಆದರ್ಶನ ಜೊತೆ ನಿನ್ನೆ (ಫೆಬ್ರವರಿ 23) ಜಗಳವಾಡಿದ್ದ ಪ್ರೇಯಸಿ ಸುಚಿತ್ರಾ(17), ಇಂದು (ಫೆಬ್ರವರಿ 24) ಸಾದೇನಹಳ್ಳಿಯ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪ್ರಿಯಕರ ಆದರ್ಶ ಬೇರೊಬ್ಬಳ ಜತೆ ಮಾತನಾಡಿದ್ದಕ್ಕೆ ಪ್ರಿಯತಮೆ ಸುಚಿತ್ರಾ ಕೋಪಮಾಡಿಕೊಂಡಿದ್ದಳು. ಇದೇ ವಿಚಾರವಾಗಿ ಆದರ್ಶನ ಜೊತೆ ಜಗಳವಾಡಿದ್ದಳು. ಬಳಿಕ ಅದೇನಾಯ್ತೋ ಏನೋ ಪ್ರಿಯಕರನ ನಡೆಯಿಂದ ಬೇಸರಗೊಂಡು ಸುಚಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಲ್ಲಿ ಸತ್ಯಾಸತ್ಯತೆ ತಿಳಿದುಬರಬೇಕಿದೆ.