Sunday, April 18, 2021

Latest Posts

ನಟ ವಿಜಯ್ ಮತ ಚಲಾಯಿಸಲು ಯಾವ ವಾಹನದಲ್ಲಿ ಬಂದ್ರು ಗೊತ್ತಾ? ಅಲ್ಲಿದ್ದವರೆಲ್ಲ ಅವರ ವೆಹಿಕಲ್ ನೋಡಿ ಬೆರಗಾದ್ರು!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸೆಲೆಬ್ರಿಟಿಗಳು ಕಾಸ್ಟ್ಲಿ ಕಾರ್ ಗಳಲ್ಲಿ ಮತಗಟ್ಟೆಗೆ ಬಂದಿಳಿದು ಮತ ಚಲಾಯಿಸುವುದು ಮಾಮೂಲಿ. ಆದರೆ ತಮಿಳು ನಟ ವಿಜಯ್ ಸೈಕಲ್ ನಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದು, ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಹೌದು.. ನಟ ವಿಜಯ್ ಇಂದು ಬೆಳಗ್ಗೆ ಚೆನ್ನೈ ನ ನೀಲಂಕಾರೈನಲ್ಲಿರುವ ಚುನಾವಣ ಮತದಾನ ಕೇಂದ್ರಕ್ಕೆ ಸೈಕಲ್ ನಲ್ಲಿ ಹೋಗಿ ಮತದಾನ ಮಾಡಿದ್ದಾರೆ. ವಿಜಯ್ ಅವರ ಸೈಕ್ಲಿಂಗ್ ದೃಶ್ಯಗಳು ಇನ್ಸ್ ಟಾಗ್ರಾಂ ನಲ್ಲಿ ಸಾಕಷ್ಟು ವೈರಲ್ ಆಗಿದ್ದು, 50 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

Watch: Actor Vijay cycles to TN polling booth to cast his vote | The News Minute

ತಮಿಳುನಾಡು ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ರಾಜ್ಯದಲ್ಲಿ 88 ಸಾವಿರಕ್ಕೂ ಅಧಿಕ ಪೋಲಿಂಗ್ ಬೂತ್ ಗಳನ್ನು ಇರಿಸಲಾಗಿದೆ. ಇಂದು ಬೆಳಗ್ಗೆಯಿಂದ ನಟ ಅಜಿತ್ ದಂಪತಿ, ನಟ ಕಮಲ್ ಹಾಸನ್ ಹಾಗೂ ಅವರ ಪುತ್ರಿಯರು, ನಟ ರಜಿನಿಕಾಂತ್, ನಟ ಸೂರ್ಯ ಸೇರಿದಂತೆ ಅನೇಕ ಟಾಲಿವುಡ್ ತಾರೆಯರು ಮತದಾನ ಮಾಡಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss