ಹೊಸದಿಗಂತ ವರದಿ, ಕೊಡಗು:
ಜಿಲ್ಲೆಯಲ್ಲಿ ಹೋಂ ಮೇಡ್ ಚಾಕಲೇಟ್ ತಯಾರಿಸಲಾಗುತ್ತಿದೆ. ಅದೇ ರೀತಿ ಕಾಫಿಯಿಂದ ಜ್ಯೂಸ್ ಮಾಡಬಹುದೇ ಎಂಬ ಬಗ್ಗೆ ಅವಲೋಕನ ನಡೆಯಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸಲಹೆ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಕಾಫಿ ಮಂಡಳಿ ಹಾಗೂ ಬೆಂಗಳೂರಿನ ಕೆಪೆಕ್ ವತಿಯಿಂದ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ‘ಆತ್ಮ ನಿರ್ಭರ ಭಾರತ್’ ಅಭಿಯಾನ ಪ್ರಯುಕ್ತ ಪ್ರಧಾನಮಂತ್ರಿ ಅವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ(ಪಿಎಂಎಫ್ಎಂಇ) ಯೋಜನೆಯಡಿ ಒಂದು ಜಿಲ್ಲೆಗೆ ಒಂದು ಉತ್ಪನ್ನ ಮತ್ತು ಕೃಷಿ ಮೂಲಭೂತ ಸೌಕರ್ಯ ಯೋಜನೆಯ ಬಗ್ಗೆ ಅರಿವು ಮೂಡಿಸುವ ಜಿಲ್ಲಾ ಮಟ್ಟದ ‘ತಾಂತ್ರಿಕ ಕಾರ್ಯಾಗಾರ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಕೃಷಿಗೆ ಪೂರಕವಾದ ಸಂಪನ್ಮೂಲಗಳು ವಿಪುಲವಾಗಿದ್ದು, ಆ ದಿಸೆಯಲ್ಲಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಅಭಿವೃದ್ಧಿಗೆ ಗಮನಹರಿಸಬೇಕಿದೆ ಎಂದು ಅವರು ಕಿವಿಮಾತು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಕಾಫಿ, ಏಲಕ್ಕಿ, ಕರಿಮೆಣಸು, ಭತ್ತ, ಬಾಳೆ, ಜೇನು ಕೃಷಿ, ಹೀಗೆ ಹಲವು ಕೃಷಿ, ತೋಟಗಾರಿಕೆ ಸಂಪನ್ಮೂಲಗಳು ಯಥೇಚ್ಛವಾಗಿ ದೊರೆಯುತ್ತಿದ್ದು, ಈ ಸಂಪನ್ಮೂಲಗಳ ಸದ್ಬಳಕೆ ಮತ್ತಷ್ಟು ಕೃಷಿಕರಿಗೆ ದೊರೆಯಬೇಕು ಎಂದರು.
ನೇರ ರಫ್ತಿಗೆ ಒತ್ತು ನೀಡಿ: ಕೃಷಿ, ತೋಟಗಾರಿಕೆ, ಹೀಗೆ ಹಲವು ಕೃಷಿ ಬೆಳೆಗಳನ್ನು ರಫ್ತು ಮಾಡುವ ನಿಟ್ಟಿನಲ್ಲಿ ಕೃಷಿಕರು ನೇರವಾಗಿ ತೊಡಗಿಸಿಕೊಂಡು ಆರ್ಥಿಕವಾಗಿ ಮತ್ತಷ್ಟು ಸಫಲರಾಗುವಲ್ಲಿ ಹೆಚ್ಚಿನ ಉತ್ತೇಜನ ನೀಡಬೇಕಿದೆ. ಮೌಲ್ಯಾಧಾರಿತ ಉತ್ಪನ್ನಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಕೃಷಿಯನ್ನು ಲಾಭದಾಯಕವಾಗಿ ಮಾಡಿ ರೈತರು ಅಭಿವೃದ್ಧಿಯತ್ತ ದಾಪುಗಾಲು ಹಾಕುವಲ್ಲಿ ಇನ್ನಷ್ಟು ಪ್ರಯತ್ನಗಳು ನಡೆಯಬೇಕಿದೆ ಎಂದು ಡಾ.ಬಿ.ಸಿ.ಸತೀಶ ಅವರು ತಿಳಿಸಿದರು.
ಸೌಲಭ್ಯಗಳ ಬಳಕೆಯಾಗಲಿ: ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ಮಾತನಾಡಿ, ಕೃಷಿ ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳಿದ್ದು, ಈ ಯೋಜನೆಗಳನ್ನು ರೈತರು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಕೃಷಿ, ವಾಣಿಜ್ಯ ಚಟುವಟಿಕೆಗೆ ಬ್ಯಾಂಕುಗಳಿಂದಲೂ ಸಹಾಯಧನ ಸೌಲಭ್ಯಗಳು ದೊರೆಯಲಿದ್ದು, ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕೇಂದ್ರ ಪುರಸ್ಕೃತ ಕೃಷಿ ಮೂಲ ಸೌಕರ್ಯ ನಿಧಿಯಡಿ ಹಣಕಾಸು ಸೌಲಭ್ಯಗಳು, ಇ-ಮಾರುಕಟ್ಟೆ ವೇದಿಕೆ ಸೇರಿದಂತೆ ಗೋದಾಮುಗಳ ನಿರ್ಮಾಣ, ಪ್ಯಾಕ್ ಹೌಸ್ಗಳು, ವಿಂಗಡಣೆ ಮತ್ತು ಶ್ರೇಣ ೀಕರಣ ಘಟಕಗಳು, ಶೀತಲ ಗೃಹ, ಸಾಗಾಣ ಕೆ ಸೌಲಭ್ಯಗಳು, ಪ್ರಾಥಮಿಕ ಸಂಸ್ಕರಣಾ ಕೇಂದ್ರಗಳು, ಮೌಲ್ಯಮಾಪನ ಘಟಕಗಳು ಹೀಗೆ ಕೃಷಿ ಚಟುವಟಿಕೆಗಳನ್ನು ಹಾಗೂ ಯೋಜನೆಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.