ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರ್ಥ್ ಡೇ ಅಂದ ಕೂಡಲೇ ನೆನಪಾಗೋದು ಕೇಕ್ ಕಟ್ಟಿಂಗ್, ಪಾರ್ಟಿಗಳು. ಕೆಲವೊಮ್ಮೆ ಈ ಪಾರ್ಟಿಯಲ್ಲಿ ಅಚಾತುರ್ಯವೂ ನಡಿಯುತ್ತೆ. ಮತ್ತೆ ಕೆಲವೊಮ್ಮೆ ಕಾಮಿಡಿಗಳೂ ನಡೆಯುತ್ತೆ.
ಅಂತಹದ್ದೇ ಕಾಮಿಡಿ ವಿಡಿಯೋವೊಂದು ಈಗ ವೈರಲ್ ಆಗಿದೆ. ಇದಕ್ಕೆ 25ಸಾವಿರಕ್ಕೂ ಹೆಚ್ಚು ವ್ಯೂಸ್ ಆಗಿದೆ.
ಸ್ನೇಹಿತನೊಬ್ಬನ ಹುಟ್ಟುಹಬ್ಬಕ್ಕೆ ಇತರೆ ನಾಲ್ವರು ಕೇಕ್ ತಂದು ಇರಿಸುತ್ತಾರೆ. ಅದರ ಮೇಲೆ ಕ್ಯಾಂಡಲ್ ಇಟ್ಟು ಊದಲು ಹೇಳುತ್ತಾರೆ. ಪ್ರೀತಿಯಿಂದ ಹಾಡಿ, ದೇವರಲ್ಲಿ ಪ್ರಾರ್ಥಿಸುತ್ತಾರೆ. ಇದಾದ ಮರುಕ್ಷಣ ಸ್ನೇಹಿತರಲ್ಲಿ ಒಬ್ಬ ಕ್ಯಾಂಡಲ್ ಊದಿ, ಕೇಕ್ ಕತ್ತರಿಸಿ ಅವನ ಕಡೆಗೆ ಎಸೆದು ಇಡೀ ಕೇಕ್ ಅನ್ನು ತಾವೆಲ್ಲರೂ ತೆಗೆದುಕೊಂಡು ಹೋಗುತ್ತಾರೆ.