Friday, July 1, 2022

Latest Posts

ಶಿವನ ಲುಕ್‌ ನಲ್ಲಿ ರಣಬೀರ್‌, ಫಿದಾ ಆದ ಅಭಿಮಾನಿಗಳು! ಮೋಷನ್‌ ಪೋಸ್ಟರ್‌ ಹೇಗಿದೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ರಣಬೀರ್‌ ಕಪೂರ್‌ ಹಾಗೂ ಆಲಿಯಾ ಭಟ್‌ ಒಟ್ಟಾಗಿ ನಟಿಸುತ್ತಿರುವ ಮೊದಲ ಚಿತ್ರ ʼಬ್ರಹ್ಮಾಸ್ತ್ರʼದ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದ್ದು, ಇದಕ್ಕೆ ಬಾಲಿವುಡ್‌ ಮಂದಿ ಫಿದಾ ಆಗಿದ್ದಾರೆ.

ಸಿನಿಮಾ ಸೆಟ್ಟೇರಿ ಸಾಕಷ್ಟು ವರ್ಷಗಳಾದರೂ ಚಿತ್ರೀಕರಣ ವಿಳಂಬವಾಗುತ್ತಿರುವುದು ಅಭಿಮಾನಿಗಳಿಗೆ ಬೇಸರ ತಂದಿತ್ತು. ಈಗ ಚಿತ್ರದ ಮೋಷನ್‌ ಪೋಸ್ಟರ್‌ ನಲ್ಲಿ ರಣಬೀರ್‌ ಶಿವನ ಅವತಾರ ತಾಳಿದ್ದು, ತ್ರಿಶೂಲ ಹಿಡಿದು ನಿಂತಿರುವ ಪೋಸ್ಟರ್‌ ಗೆ ಅಭಿಮಾನಿಗಳು ಮನಸೋತಿದ್ದಾರೆ.

ಈ ಚಿತ್ರದಲ್ಲಿ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್‌ ನಿರ್ಮಾಣದ ಹೊಣೆ ಹೊತ್ತಿದ್ದು, ನಾಯಕಿಯಾಗಿ ಆಲಿಯಾ ಭಟ್​, ಜತೆಗೆ ಚಿತ್ರದಲ್ಲಿ ಅಮಿತಾಭ್​ ಬಚ್ಚನ್​, ನಾಗಾರ್ಜುನ, ಮೌನಿ ರಾಯ್​ ಮತ್ತು ಡಿಂಪಲ್​ ಕಪಾಡಿಯ ಸೇರಿದಂತೆ ಹಲವು ಕಲಾವಿದರು ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss