ರಕ್ತದೊತ್ತಡ ಸಮಸ್ಯೆ ಈಗ ಸಾಮಾನ್ಯ ಕಾಯಿಲೆ ಆಗಿಬಿಟ್ಟಿದೆ. ಇದರಿಂದ ಅನೇಕರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ರಕ್ತದೊತ್ತಡವನ್ನು ನಿಯಂತ್ರಿಸಲು ಸೂಕ್ತ ಡಯಟ್, ಔಷಧೋಪಚಾರಗಳು ಪರಿಣಾಮಕಾರಿಯಾಗಲಿದೆ. ಹಾಗಿದ್ದರೆ ಬಿಪಿ ಇರುವವರು ಯಾವೆಲ್ಲಾ ಆಹಾರಗಳನ್ನು ಸೇವಿಸಬಹುದು ಎಂದು ತಿಳಿಯೋಣ..
ಸಿಟ್ರಸ್ ಹಣ್ಣು: ಅಂದರೆ ಸ್ವಲ್ಪ ಹುಳಿ ಮಿಶ್ರಿತ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ದ್ರಾಕ್ಷಿ, ಕಿತ್ತಳೆ,ನಿಂಬೆ ರಸ ಹೆಚ್ಚು ಪರಿಣಾಮಕಾರಿಯಾಗಿದೆ.
ಫ್ಯಾಟಿ ಫಿಶ್: ಕೊಬ್ಬಿನ ಮೀನಿನಲ್ಲಿರುವ ಒಮೆಗಾ 3 ಅಂಶವು ದೇಹದಲ್ಲಿನ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಕುಂಬಳಕಾಯಿ ಬೀಜ: ಇದು ನೋಡಲು ಸಣ್ಣದಾಗಿದ್ದರೂ, ಇದರಲ್ಲಿನ ಶಕ್ತಿ ಅಪಾರ. ಇದರಲ್ಲಿ ಪೊಟಾಶಿಯಂ, ಮೆಗ್ನೀಶಿಯಂ, ಪೋಷಕಾಂಶಗಳಿದ್ದು ರಕ್ತದೊತ್ತಡವನ್ನು ಕಡಿಮೆಕೊಳಿಸುತ್ತದೆ.
ಬೀನ್ಸ್, ಕಾಳುಗಳು: ಇವುಗಳಲ್ಲಿರುವ ನಾರಿನಾಂಶ, ಮೆಗ್ನೀಶಿಯಂ, ಪೊಟಾಶಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಬೆರ್ರಿ: ಬ್ಲೂಬೆರಿ, ರಸ್ಬೆರಿ, ಸ್ಟ್ರಾಬೆರಿಗಳಂತಹ ಹಣ್ಣುಗಳು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಿ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುತ್ತದೆ.
ಪಿಸ್ತಾ: ಇದರಲ್ಲಿರುವ ಪೋಷಕಾಂಶಗಳು ರಕ್ತದೊತ್ತವನ್ನು ನಿಯಂತ್ರಿಸಿ, ಹೃದಯ ಸಂಬಂಧಿ ಸಮಸ್ಯೆಗಳಿಂದ ಪಾರು ಮಾಡುತ್ತದೆ.
ಗೆಡ್ಡೆಕೋಸು: ಇದನ್ನು ಸೇವಿಸುವುದರಿಂದ ರಕ್ತ ಪರಿಚಲನೆ ಸುಲಭವಾಗುತ್ತದೆ. ಇದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ.
ಕ್ಯಾರೆಟ್: ಇದು ಸಿಹಿ, ಗರಿ ಹಾಗೂ ಹೆಚ್ಚು ನ್ಯೂಟ್ರೀಷನ್ ಹೊಂದಿರುವ ತರಕಾರಿ. ಇದರ ಸೇವನೆಯಿಂದ ರಕ್ತದೊತ್ತಡವನ್ನು ಸುಧಾರಿಸಿ, ಏರಿಳಿತವನ್ನು ಸಮತೋಲನಕ್ಕೆ ತರಲಿದೆ.