ಶ್‌, ಓಂ, ಸೂಪರ್‌ ನಂತರ ಮತ್ತೊಂದು ವಿಶೇಷ ಸಿನಿಮಾ ಮಾಡ್ತಿದ್ದಾರೆ ಉಪ್ಪಿ: ಹೇಗಿದೆ ನೋಡಿ ಶೀರ್ಷಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸ್ಯಾಂಡಲ್ ವುಡ್‌ ನ ಬಹುಮುಖ ಪ್ರತಿಭೆ, ನಿರ್ದೇಶಕರಾಗಿ, ನಟರಾಗಿ ಸಖತ್‌ ಹಿಟ್‌ ಸಿನಿಮಾಗಳ ಮೂಲಕ ಸಿನಿ ಪ್ರೇಮಿಗಳನ್ನು ರಂಜಿಸಿದ ನಟ ಉಪೇಂದ್ರ ಈಗ ಮತ್ತೊಂದು ಹೊಸ ಶೀರ್ಷಿಕೆಯ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

ಚಿತ್ರಕ್ಕೆ ವಿಭಿನ್ನವಾದ ಶೀರ್ಷಿಕೆ ನೀಡುವುದು ಉಪೇಂದ್ರ ಅವರ ಸ್ಟೈಲ್‌, ಚಿತ್ರಕ್ಕೆ ಯು ಎಂದು ಶೀರ್ಷಿಕೆ ನೀಡಿದ್ದು, ಮಧ್ಯದಲ್ಲಿ ಬೆಂಕಿಯಲ್ಲಿ ಉದ್ದ ನಾಮ ಎಳೆದಿದ್ದಾರೆ. ಇದರ ಅಡಿ ಬರಹವನ್ನು 7 ಭಾಷೆಯಲ್ಲಿ ಬರೆದಿದ್ದು, ಇವನು ಹೇಗೆ ಬರುತ್ತಾನೆ ಎಂದು ತಿಳಿದಿಲ್ಲ, ಆದರೆ ನಿಶ್ಚಿತವಾಗಿಯೂ ಭಂದೇ ಬರುತ್ತಾನೆ ಎಂದು ಬರೆದಿದೆ.

ಈ ಚಿತ್ರಕ್ಕೆ ಜಿ. ಮನೋಹರ್‌ ಹಾಗೂ ಶ್ರೀಕಾಂಶ್‌ ಕೆ.ಪಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಪ್ರಸ್ತುತ ಉಪೇಂದ್ರ ಅವರು ಆರ್‌. ಚಂದ್ರ ಅವರ ನಿರ್ದೇಶನದ ಕಬ್ಜ ಸಿನಿಮಾ ಶೂಟಿಂಗ್‌ ನಲ್ಲಿ ಬ್ಯುಸಿಯಾಗಿದ್ದಾರೆ.

ಈ ನಡುವೆ ಉಪ್ಪಿ ಅವರ ಹೊಸ ಶೀರ್ಷಿಕೆಯ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಸಿನಿಮಾದ ಅಪ್ ಡೇಟ್ಸ್‌ ಗಾಗಿ ಕಾತುರದಿಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!