ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಇಂದು ಮತ್ತೆ ನಾಳೆ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ಬಗ್ಗೆ ಬೆಸ್ಕಾಂ ಮಾಹಿತಿ ನೀಡಿದೆ.
ನಿರ್ವಹಣಾ ಕಾರ್ಯನಡೆಯುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸೆ.12ರ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ವಸಂತ ವಲ್ಲಭ ನಗರ, ಶಾರದ ನಗರ, ಮಾರುತಿ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಟೀಚರ್ಸ್ ಕಾಲೋನಿ, ಜರಗನಹಳ್ಳಿ, ಎಂಎಸ್ ಲೇಔಟ್, ರಾಜಮ್ಮ ಗಾರ್ಡೆನ್, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಜೆಪಿ ನಗರ 2ನೇ ಹಂತ, ಕತ್ತರಿಗುಪ್ಪೆ, ಬನಶಂಕರಿ ಮೂರನೇ ಹಂತದಲ್ಲಿ ವಿದ್ಯುತ್ ಕಡಿತ ಉಂಟಾಗಬಹುದು.
ರಾಜಾಜಿನಗರದ ಸುತ್ತಮುತ್ತಲಿನ ಪ್ರದೇಶಗಳಾದ ರಾಜೀವ್ ಗಾಂಧಿ ನಗರ, ಬ್ಯಾರವೇಶ್ವರ ನಗರ, ಕೆಬ್ಬೆಹಳ್ಳಿ, ಹನುಮಂತರಾಯನ ಪಾಳ್ಯ, ತಿಗಳರ ಪಾಳ್ಯ, ವಿನಾಯಕನಗರ, ರಾಘವೇಂದ್ರ ನಗರ, ರಾಘವೇಂದ್ರ ಕೈಗಾರಿಕಾ ಪ್ರದೇಶ, ಬಾಲಾಜಿನಗರ, ಕರಿವೋಬನಹಳ್ಳಿ, ಇಂದಿರಾನಗರ, ಬ್ಲೂಜಾಯ್ ಬಡಾವಣೆ, ಗಂಗೊಂಡನಹಳ್ಳಿ ಮುಖ್ಯರಸ್ತೆ, ತಿಪ್ಪೇನಹಳ್ಳಿ ಸರ್ಕಾರಿ ಆಸ್ಪತ್ರೆ, ಅನ್ನಪೂರ್ಣೇಶ್ವರಿ ಬಡಾವಣೆ, ಎಸ್ಎಲ್ವಿ ಕೈಗಾರಿಕಾ ಪ್ರದೇಶ, ನಂದಗೋಕುಲ ಕೈಗಾರಿಕಾ ಪ್ರದೇಶ, ಚೇತನ್ ಸರ್ಕಲ್, ಸಪ್ತಗಿರಿ ಬಡಾವಣೆ ಸೇರಿದಂತೆ ವೇಣುಗೋಪಾಲ ನಗರ, ದೊಡ್ಡ ಬಿದರಕಲ್ಲು, ಸುವರ್ಣ ನಗರ, ಮಾರಣ್ಣ ಬಡಾವಣೆ, ತಿಪ್ಪೇನಹಳ್ಳಿ, ಅಂದಾನಪ್ಪ ಬಡಾವಣೆ, ಮುನೇಶ್ವರ ಬಡಾವಣೆ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಲಿದೆ ಎಂದು ಬೆಸ್ಕಾಂ ಹೇಳಿದೆ.