spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇದು ಅಂತಿಂತಾ ಮನೆ ಅಲ್ಲ… ನೀವು ಹೋಗುವಲ್ಲೆಲ್ಲ ಕೊಂಡೊಯ್ಯಬಹುದಾದ ಸಂಚಾರಿ ಹೌಸ್!

- Advertisement -Nitte
  • ಹಿತೈಷಿ

ಮನೆ ಕಟ್ಟೋದು ಪ್ರತಿಯೊಬ್ಬ ವ್ಯಕ್ತಿಯ ಅತಿದೊಡ್ಡ ಕನಸು. ಹಾಗಂತ ಎಲ್ಲರೂ ದೊಡ್ಡ ಬಂಗಲೆಯಲ್ಲೇ ಇರೋಕೆ ಆಗೋದಿಲ್ಲ ಅಲ್ವಾ? ಸಣ್ಣ ಮನೆಯಲ್ಲೂ ಖುಷಿಯಾಗಿ ಬದುಕಬಹುದು ಎಂದು ತೋರಿಸೊಕೆ ಈ ಯುವಕ ಮಾಡಿದ ಪ್ರಯೋಗ ಈಗ ಎಲ್ಲರ ಮನಗೆಲ್ಲುತ್ತಿದೆ.

ಮನೆ ಕಟ್ಟೋಕೆ ಅಂತಾನೇ ಹೆಚ್ಚು ಕ್ರಿಯಾತ್ಮಕ ಚಿಂತನೆಗಳಿರುವ ವಾಸ್ತು ಶಿಲ್ಪಿಗಳು ನಮ್ಮೊಡನೆ ಇರ್ತಾರೆ. ಅವರ ವಿಭಿನ್ನ ಪ್ರಯತ್ನ, ಆಲೋಚನೆಗಳು ಮೆಚ್ಚಲೇಬೇಕಾದ್ದು. ಇನ್ನೂ 23 ವರ್ಷದ ಯುವಕ ತಮ್ಮೊಳಗಿನ ಆರ್ಕಿಟೆಕ್ಚರ್ ವಿಚಾರಗಳನ್ನು ಹೊರತಂದು ಒಂದು ಆಟೋವನ್ನೇ ಮನೆಯಂತೆ ಪರಿವರ್ತಿಸಿದ್ದಾರೆ.

Mobile Tiny Home Made From Old Bus Parts on Rickshaw

ಯಾರಿವನು? ಇವರ ಹೆಸರು ಅರುಣ್ ಪ್ರಭು ಎನ್.ಜಿ., ಇರೋದು ತಮಿಳುನಾಡಿನಲ್ಲಿ. ವಾಸ್ತುಶಿಲ್ಪದ ಮೇಲಿನ ಇವರ ಒಲವು ಹೆಚ್ಚಾಗಿ ಸೆಕೆಂಡ್ ಹ್ಯಾಂಡ್ ಪಿಕ್ ಅಪ್ ಆಟೋವನ್ನು ಹೈಟೆಕ್ ಮನೆಯಂತೆ ನಿರ್ಮಾಣ ಮಾಡಿದ್ದಾರೆ.

ಹೇಗಿದೆ ಗೊತ್ತಾ ಈ ಆಟೋ ಮನೆ? ಈ ಇಡೀ ಆಟೋ ಮನೆಯಲ್ಲಿ ಇಬ್ಬರು ತಮ್ಮೆಲ್ಲಾ ಚಟುವಟಿಕೆ ಮಾಡಲು ಸಾಧ್ಯವಿರುವ ಒಂದು ಸೂರು. ಇಲ್ಲಿ ಮಲಗೋಕೆ ಮಂಚ, ಅಡುಗೆ ಮಾಡೋಕೆ ಗ್ಯಾಸ್ ಸ್ಟವ್, ಬಾತ್ ಟಬ್, ಟಾಯ್ಲೆಟ್ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಯೂ ಇಲ್ಲಿದೆ.

TN Man Builds House With Kitchen, Bed & Toilet Atop an Auto-Rickshaw!

ನಿರ್ಮಾಣದ ವೆಚ್ಚ? ಮತ್ತೊಂದು ಆಕರ್ಷಕ ಹಾಗೂ ಮುಖ್ಯ ವಿಚಾರವೇ ಹಣ. ಈ ಅತ್ಯಾಧುನಿಕ ಮನೆ ನಿರ್ಮಿಸಲು ಅರುಣ್ ಗೆ ಬೇಕಾಗಿದ್ದದ್ದು, ಕೇವಲ 1.5 ಲಕ್ಷ ರೂ. ಅಂತೆ. ಅಷ್ಟೇ ಅಲ್ಲ, ಈ ಮನೆಯನ್ನ ಐದೇ ತಿಂಗಳಿನಲ್ಲಿ ಸಿದ್ಧಪಡಿಸಿದ್ದಾರೆ. ಈ ಇಡೀ ಮನೆ 36 ಚದರ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ.

Tamil Nadu youth develops portable house on the back of an auto | Chennai  News - Times of India

ಮತ್ತಷ್ಟು ವಿಶ್ಲೇಷಣೆ: ಇಲ್ಲಿನ ಅಡುಗೆ ಮನೆಯಲ್ಲಿ ಎಲ್ಲಾ ಪಾತ್ರೆಗಳನ್ನು ಜೋಡಿಸೋಕೆ ಜಾಗ, ಜತೆಗೆ ಅಡುಗೆ ಘಾಟು ಹೋಗೋಕೆ ಅಂತಾನೇ ಎಗ್ಸಾಸ್ಟ್ ಫ್ಯಾನ್ ಕೂಡ ಜೋಡಿಸಲಾಗಿದೆ. ಇದರ ಪಕ್ಕದಲ್ಲೇ ಮೆಟಲ್ ನಿಂದ ಮಾಡಿದ ಬಾತ್ ಟಬ್ ಇದೆ. ಇದರಲ್ಲಿ ಕುಳಿತು ಆರಾಮಾಗಿ ಸ್ನಾನ ಮಾಡುವುದರೊಂದಿಗೆ ಅದರಲ್ಲಿ ನಿಮ್ಮ ಎಕ್ಸ್ ಟ್ರಾ ಲಗೇಜ್ ಗಳನ್ನೂ ಇಡಬಹುದು.

ಬಟ್ಟೆ ಜೋಡಿಸೋಕೆ ಸಪರೇಟ್ ಶಲ್ಫ್, ಬಟ್ಟೆ ಹರಡೋಗೆ ಹೊರಗೆ ಕಂಬಿ, ಬಿಸಿ ನೀರಿಗೆಂದೇ ಈ ಆಟೋ ಮನೆ ಮೇಲೆ 600 ವ್ಯಾಟ್ ನ ಸೋಲಾರ್ ಪ್ಯಾನಲ್ ಅಳವಡಿಸಿರೋದು ಮತ್ತೊಂದು ವಿಶೇಷ.

Tamil Nadu youth develops portable house on the back of an auto | Chennai  News - Times of India

ಅರುಣ್ ಈ ಆಟೋ ಮನೆಗೆ ಎಲ್ ವಿಟಿ ಫ್ಲೋರಿಂಗ್ ಕೊಟ್ಟಿದ್ದಾರೆ. ಇದು ಬಿಸಿ ತಾಪಮಾನ ಹಾಗೂ ಚಳಿಯನ್ನು ಹಿಡಿದಿಡೋಕೆ ಸಹಕಾರಿಯಾಗುತ್ತೆ. ಅಷ್ಟೇ ಅಲ್ಲ ಈ ಮನೆಯ ಛಾವಣಿ ಆರ್ಚ್ ಆಕಾರದಲ್ಲಿದ್ದು, ಇದರಿಂದ ಹೆಚ್ಚು ಶಕೆ, ಬೆವರು ಆಗೋದಿಲ್ಲ ಹಾಗೂ ವಿಶಾಲವಾದ ಜಾಗ ಇರುವ ಅನುಭವವಾಗುತ್ತೆ ಅನ್ನುತ್ತಾರೆ ಅರುಣ್.

ಏಕೆ ಈ ಮನೆ? ಜನರು ಸಣ್ಣ ಜಾಗದಲ್ಲಿ ಮನೆ ಕಟ್ಟೋದು ಸಾಧ್ಯ ಇಲ್ಲ ಅನ್ನೋರಿಕೆ ಏನಾದರೂ ಮಾಡಿ ಸಾಬೀತು ಮಾಡಬೇಕೆನಿಸಿತು. ಹಾಗಾಗಿ ಈ ಆಟೋ ಮನೆ ನಿರ್ಮಾಣ ಮಾಡೋ ಪ್ಲಾನ್ ಮಾಡಿದರಂತೆ ಅರುಣ್.

ಇಷ್ಟಕ್ಕೂ ಈ ಆಟೋ ಮನೆಯಲ್ಲಿ ನೀವು ಎಲ್ಲಾದರೂ ಲಾಂಗ್ ಡ್ರೈವ್ ಕೂಡ ಹೋಗಬಹುದು.. ನೋಡಿ ಈತರ ವಿಶೇಷ ಕಲೆ ನಿಮ್ಮಲ್ಲೂ ಇದ್ದರೆ ಸಾಧಿಸಿ ಜಗತ್ತಿಗೆ ಸಾರಿಬಿಡಿ..ನೀವೇನು ಕಮ್ಮಿ ಇಲ್ಲ ಅಂತ..

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss