spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

51 ದಿನಗಳಲ್ಲಿ 28 ರಾಜ್ಯ ಸುತ್ತಿದ ಅಮ್ಮ- ಮಗ: ಇವರ ರೋಡ್ ಟ್ರಿಪ್ ಹೇಗಿತ್ತು ಗೊತ್ತಾ?

- Advertisement -Nitte
  • ಹಿತೈಷಿ

ಆಕೆಗೆ 40 ವರ್ಷ ತನ್ನ 10 ವರ್ಷದ ಮಗನೊಂದಿಗೆ ದೇಶದ 28 ರಾಜ್ಯಗಳಿಗೆ ತಾವೇ ಸ್ವತಃ ಕಾರ್ ಡ್ರೈವ್ ಮಾಡಿಕೊಂಡು ಹೋಗಿದ್ದಾರಂತೆ.

ಕೇರಳದ ಕೊಚ್ಚಿ ಮೂಲದ ಡಾ. ಮಿತ್ರಾ ಸತೀಶ್ ವೃತ್ತಿಯಲ್ಲಿ ಪ್ರಾಧ್ಯಾಪಕಿ. ಕೋವಿಡ್ ಲಾಕ್ ಡೌನ್ ಬಳಿಕ ಏನಾದರೂ ವಿಭಿನ್ನವಾದುದ್ದನ್ನು ಪ್ರಯತ್ನಿಸೋಕೆ ತೀರ್ಮಾನಿಸಿದ್ರು ಮಿತ್ರಾ. ಆಗಲೇ ಹೊಳೆದಿದ್ದು, ಈ ರೋಡ್ ಟ್ರಿಪ್.. ಹಾಗಂತ ಇವರೇನೋ 500 ಕಿ.ಮೀ ಸಂಚರಿಸಿ ಬಂದವರಲ್ಲ ಬದಲಿಗೆ ಕೇರಳದಿಂದ ಶುರುಮಾಡಿ ಜಮ್ಮು ಕಾಶ್ಮೀರದವರೆಗೆ ಬರೋಬ್ಬರಿ 17 ಸಾವಿರ ಕಿ.ಮೀ. ಸಂಚರಿಸಿ ಬಂದಿದ್ದಾರೆ ಈ ಅಮ್ಮ-ಮಗ.

40-year-old mother and son on epic road tripಈ ಇಡೀ ಸಂಚಾರಕ್ಕೆ ಅವರಿಗೆ ಬೇಕಾಗಿದ್ದು 51 ದಿನ. ಅಷ್ಟರಲ್ಲಿ ಅವರು 28 ರಾಜ್ಯ, 6 ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಲೆಕ್ಕವಿಲ್ಲದ ಕಥೆಗಳು ಮತ್ತು ಅನುಭವಗಳನ್ನು ಪಡೆದಿದ್ದಾರೆ.

ಆರಂಭ ಹೇಗಿತ್ತು? ಇಷ್ಟಕ್ಕೂ ಡಾ. ಮಿತ್ರಾ ಅವರಿಗೆ ಈ ಡ್ರೈವಿಂಗ್, ರೋಡ್ ಟ್ರಿಪ್ ಗಳ ಬಗ್ಗೆ ಹೆಚ್ಚು ಆಸಕ್ತಿ ಇರಲಿಲ್ಲ. ಆದರೆ ದೇಶದ ಇತರ ಭಾಗಗಳ ಬಗ್ಗೆ ಅನ್ವೇಷಣೆ ಮಾಡೋ ಕಲ್ಪನೆ ಅವರನ್ನು ಈ ಪ್ರವಾಸಕ್ಕೆ ಪ್ರೇರೇಪಿಸಿತು.

Going on 'oru desi drive'- The New Indian Express ಪ್ಲಾನ್ ಏನು?
ಮಗನೊಂದಿಗೆ ಪ್ರಯಾಣ ಮಾಡಿದ್ದು, ವಿಶೇಷವಾಗಿತ್ತು ಹಾಗೇ ಖುಷಿಯಾಯಿತು. ಇವರ ಪ್ಲಾನ್ ನಂತೆ ಪ್ರತಿ ರಾಜ್ಯದ 1 ಹಳ್ಳಿಗೆ ಭೇಟಿ ನೀಡಿ ಅಲ್ಲಿನ ಅದ್ಭುತ ಕಲೆ, ಕರಕುಶಲ ಮತ್ತು ಸಂಸ್ಕೃತಿಯನ್ನು ಅರಿಯೋದು ಪ್ರಮುಖವಾಗಿತ್ತು. ತಾವೇ ಡ್ರೈವ್ ಮಾಡಿಕೊಂಡು ಹೋಗಬೇಕಿದ್ದರಿಂದ ಕೆಲವೊಂದಷ್ಟು ಟೈರ್ ರಿಪೇರಿ, ಏರ್ ಪ್ರೆಷರ್ ಗಳು ಸೇರಿದಂತೆ ಸಣ್ಣಪುಟ್ಟ ರಿಪೇರಿ ಕೆಲಸವನ್ನು ಕಲಿತ್ತಿದ್ದರು ಮಿತ್ರಾ.
ಮಗ ಸಣ್ಣವನಾದ್ದರಿಂದ ಅವನಿಗಾಗಿ ಊಟ, ಔಷಧ, ಬಟ್ಟೆಗಳನ್ನೆಲ್ಲಾ ಪ್ಯಾಕ್ ಮಾಡಿಕೊಂಡಿದ್ದರು.

This wanderlust mother-son duo explores India on a road trip | Onmanorama Travelಅನುಭವ?
ತಮ್ಮ 10 ವರ್ಷದ ಮಗನಿಗೆ ಇದು ಆಕೆ ಕೊಟ್ಟ ಒಂದು ಮರೆಯಲಾಗದ ಅನುಭವವೇ ಸರಿ. 400 ವರ್ಷಗಳಿಂದ ಬೆಳೆದ ಹುಲ್ಲನ್ನು ಬಳಸಿ ನೆಲದ ಮಗ್ಗೆಯಲ್ಲಿ ಚಾಪೆ ನೇಯುವುದರಿಂದ ಹಿಡಿದು ರೋಮನ್ ಅವಶೇಷಗಳನ್ನು ಪತ್ತೆ ಮಾಡುವವರೆಗೆ ಅದೇ ಕುತೂಹಲ ಹೊಂದಿದ್ದರು.
ಕೇರಳದಲ್ಲಿ ಪ್ರಾರಂಭವಾದ ಇವರ ಪ್ರವಾಸ ಜಮ್ಮು, ಉತ್ತರಾಖಂಡ್, ಡೆಹ್ರಾಡೂನ್, ಜೈಪುರ, ಉಜ್ಜೈನಿ, ಕರ್ನಾಟಕ, ಮಹಾರಾಷ್ಟ್ರ, ಗೋವಾ ಮೂಲಕ 28 ರಾಜ್ಯಗಳಿಗೆ ಭೇಟಿ ಕೊಟ್ಟಿದ್ದಾರೆ.

100-Day Road Trip: Kerala Doc & Son Carry Back Rich Memories From Odisha  Hinterland – Odisha Bytes

ಪ್ರಯಾಣದ ವೇಳೆ ಮಿತ್ರಾ ಕೆಲವೊಮ್ಮ ದಾರಿ ತಪ್ಪುತ್ತಿದ್ದರು. ಆದರೆ ಆಗ ಅವರಿಗೆ ಯಾವುದೇ ರೀತಿಯ ಭಯ ಆತಂಕ ಇರಲಿಲ್ಲ. ಹೆಣ್ಣುಮಕ್ಕಳಿಗೆ ಭಾರತ ಅತ್ಯಂತ ಸುರಕ್ಷಿತ ಸ್ಥಳ ಎನ್ನುತ್ತಾರೆ ಮಿತ್ರಾ.

ನೆನಪು?
ಭಾರತದ ಮೊದಲ ಹಸಿರು ಗ್ರಾಮವಾಗಿರುವ ನಾಗಾಲ್ಯಾಂಡ್ ನ ಖೋನೋಮದಲ್ಲಿ ಕಳ್ಳ ಬೇಟೆ ಮಾಡುತ್ತಿದ್ದವರು ಈಗ ಸಂಪೂರ್ಣ ಬದಲಾಗಿದ್ದಾರೆ. ಈಗ ಈ ಊರಿನಲ್ಲಿ ಯಾವುದೇ ಬೇಟೆ ನಡೆಯೋಲ್ಲ. ಬದಲಿಗೆ ಎಲ್ಲರೂ ಪರಿಸರ ಸ್ನೇಹಿ ಕೆಲಸ ಮಾಡ್ತಿದ್ದಾರೆ.

100-Day Road Trip: Kerala Doc & Son Carry Back Rich Memories From Odisha Hinterland – Odisha Bytesಒಟ್ಟು ವೆಚ್ಚ?
ಈ ಇಡೀ ಪ್ರಯಾಣದ ವೆಚ್ಚ ಮಿತ್ರಾ ಅವರಿಗೆ 1.5 ಲಕ್ಷ ರೂ. ಆಗಿದೆ. ಊಟ, ವಾಸ್ತವ್ಯಕ್ಕೆ ಸ್ನೇಹಿತರ ಮನೆ, ಗ್ರಾಮದಲ್ಲಿ ಒಂದು ಮನೆಯಲ್ಲಿ ಕಳೆಯಲಾಗಿದೆ ಎನ್ನುತ್ತಾರೆ ಮಿತ್ರಾ.

Kerala woman drives 16,800km in 51 days across 28 states | Kochi News - Times of Indiaಒಬ್ಬ ವ್ಯಕ್ತಿಗೆ ಈ ರೀತಿಯ ಸಾಹಸ ಬದುಕು ತುಂಬಾ ಕಲಿಸುತ್ತದೆ. ಮಕ್ಕಳಿಗಂತು ಇದು ಜೀವಮಾನದ ಪಾಠವಾಗಿರುತ್ತೆ. ಲೈಫ್ ಬೋರ್ ಆಗಿದೆ ಅನ್ನೋರಿಗೆ ಮಿತ್ರಾ ಒಂದು ಉತ್ತಮ ಉದಾಹರಣೆಯಾಗಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss