Wednesday, August 17, 2022

Latest Posts

ಆಭರಣ ಖರೀದಿ ಮಾಡುವವರಿಗೆ ಶುಭದಿನ: ಚಿನ್ನದ ಬೆಲೆ ಇಳಿಕೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು, ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇ.0.4ರಷ್ಟು ಇಳಿದು 10 ತಿಂಗಳಿಗೆ ಕನಿಷ್ಠ 44,768 ರೂ.ಗೆ ತಲುಪಿದೆ.

ಚಿನ್ನದ ಜೊತೆಗೆ ಬೆಳ್ಳಿ ಬೆಲೆಯು ಶೇಕಡಾ 0.8ರಷ್ಟು ಇಳಿದು, ಕೆಜಿಗೆ 67,473 ರೂಪಾಯಿಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಚಿನ್ನವು 10 ಗ್ರಾಂಗೆ ಶೇಕಡಾ 1.2ರಷ್ಟು ಅಥವಾ 600 ರೂಪಾಯಿನಷ್ಟು ಕುಸಿದಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ ಶೇ. 1.6ರಷ್ಟು ಅಥವಾ 1150 ರೂ. ಕುಸಿದಿದೆ. ಒಟ್ಟಾರೆಯಾಗಿ ಚಿನ್ನವು ಗರಿಷ್ಠ 56,200 ರೂಪಾಯಿನಿಂದ 11,500 ರೂಪಾಯಿ ಕಡಿಮೆಯಾಗಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ, ಹಿಂದಿನ ವಹಿವಾಟಿನಲ್ಲಿ ಒಂಬತ್ತು ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದ ನಂತರ ಚಿನ್ನದ ಬೆಲೆ ಇಂದು ಔನ್ಸ್‌ಗೆ 1,711 ಯುಎಸ್ ಡಾಲರ್‌ನಷ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!