Wednesday, August 17, 2022

Latest Posts

ಹೆಂಡತಿಯ ಬ್ರೇನ್ ಟ್ಯೂಮರ್‌ಗೆ ಬೇಸತ್ತು ಈತ ಮಾಡಿದ್ದು ನಿಜಕ್ಕೂ ನೀಚ ಕೆಲಸ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಹೆಂಡತಿಗೆ ಮಾರಣಾಂತಿಕ ಕಾಯಿಲೆ ಬಂದರೆ ಗಂಡ ಏನಾದರೂ ಮಾಡಿ, ಎಷ್ಟಾದರೂ ಕಷ್ಟಪಟ್ಟು ಉಳಿಸಿಕೊಳ್ಳುತ್ತಾನೆ. ಇದಕ್ಕೆ ತದ್ವಿರುದ್ಧ ಎನ್ನುವ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.
ಗಂಡನೊಬ್ಬ ಹೆಂಡತಿಯ ಬ್ರೇನ್ ಟ್ಯೂಮರ್‌ಗೆ ಚಿಕಿತ್ಸೆ ಕೊಡಿಸಲಾರದೆ ಆಕೆಯನ್ನು ಕೊಲೆ ಮಾಡಿದ್ದಾನೆ.
ಪರಭಾನಿ ಜಿಲ್ಲೆಯ ವ್ಯಕ್ತಿಯೊಬ್ಬ ಇತ್ತೀಚೆಗಷ್ಟೇ ಕೆಲಸ ಕಳೆದುಕೊಂಡಿದ್ದ. ಹೆಂಡತಿಯ ಬ್ರೇನ್ ಟ್ಯೂಮರ್‌ನ ಚಿಕಿತ್ಸೆ ವೆಚ್ಚದಿಂದ ಜೀವನ ನಡೆಸಲು ಆಗುತ್ತಿರಲಿಲ್ಲ. ತಿಂಗಳ ಖರ್ಚು ಭರಿಸಲಾಗದೇ ವ್ಯಕ್ತಿ ತನ್ನ ಹೆಂಡತಿಯನ್ನೇ ಕೊಂದಿದ್ದಾನೆ.
ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದು, ರಕ್ತದ ಬಟ್ಟೆಗಳನ್ನು ಮನೆಯಿಂದ ಹೊರಗೆಸೆದಿದ್ದಾನೆ. ಇದನ್ನು ಕೆಲವರು ಗಮನಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆತನನ್ನು ಬಂಧಿಸಿದ್ದು, ತಾನೇ ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!