ಏನಿದು ಸಮರ್ಥ ಭಾರತ ನಡೆಸುತ್ತಿರುವ ಉತ್ತಮನಾಗು, ಉಪಕಾರಿಯಾಗು ಅಭಿಯಾನ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದ ಘನತೆಯನ್ನು ವಿಶ್ವಕ್ಕೆ ಪ್ರಸರಿಸಿದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ಸಮರ್ಥ ಭಾರತ ರಾಜ್ಯದಾದ್ಯಂತ ಜ.12 ರಿಂದ ಜ.26ರವರೆಗೆ ಬಿ ಗುಡ್‌ ಡು ಗುಡ್ ಅಭಿಯಾನ ನಡೆಸಲಿದೆ.

ಏನಿದು ಉತ್ತಮನಾಗು, ಉಪಕಾರಿಯಾಗು ಅಭಿಯಾನ?

ಈಗಿನ ಯುವ ಜನರಲ್ಲಿ ಸೇವಾ ಮನೋಭಾವ ಹಾಗೂ ಸೇವಾ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಸಮರ್ಥ ಭಾರತ ಈ ಅಭಿಯಾನ ಹಮ್ಮಿಕೊಂಡಿದೆ. ಕಾಲೇಜು ವಿದ್ಯಾರ್ಥಿಗಳು, ಯುವ ಉದ್ಯೋಗಿಗಳು ಸಾಮಾಜಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದೇ ಈ ಅಭಿಯಾನದ ಮೂಲ ಉದ್ದೇಶ.

ಬಿ ಗುಡ್‌: ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅತ್ಯಮೂಲ್ಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು. ಉದಾ: ಕೊಟ್ಟ ಮಾತಿಗೆ ಬದ್ಧನಾಗಿರುವುದು, ಎಲ್ಲರಿಗೂ ಗೌರವ ನೀಡುವುದು, ಶ್ರದ್ಧೆ, ಶಿಸ್ತು ಸೇರಿದಂತೆ ಇತರ ಗುಣಗಳನ್ನು ಮೈಗೂಡಿಸಿಕೊಳ್ಳುವುದು.

ಡು ಗುಡ್:‌ ವೈಯಕ್ತಿಕ ಲಾಭ, ದುರಾಸೆಗಳನ್ನು ಹೊರತುಪಡಿಸಿ ಸಾಮಾಜಿಕ ಕೆಲಸಗಳಲ್ಲಿ ಪಾಲ್ಗೊಳ್ಳುವುದು. ಇದರಲ್ಲಿ ಪರಿಸರ ಕಾಳಜಿ, ಶಿಕ್ಷಣ, ನೇತ್ರದಾನ ಸಂಕಲ್ಪ ಸೇರಿದಂತೆ ಹಲವು ಸಾಮಾಜಿಕ ಜಾಗೃತಿ ಮೂಡಿಸುವ ಚಟುವಟಿಕೆಗಳಲ್ಲಿ ಭಾಗಿಯಾಗುವುದು.

ಈ ವರ್ಷದ ಉತ್ತಮನಾಗು ಉಪಕಾರಿಯಾಗು ಅಭಿಯಾನದ ಅಡಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳು:

ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ: ಕಾಲೇಜು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಸಂಗ್ರಾಮದ ಮೇಲೆ ಸ್ವಾಮಿ ವಿವೇಕಾನಂದರ ವಿಚಾರದ ಪ್ರಭಾವ ಎನ್ನುವ ವಿಷಯದ ಕುರಿತು ಪ್ರಬಂಧ ಬರೆಯಬೇಕಿದೆ. 2500 ಪದಗಳನ್ನು ಮೀರದೆ, ಸ್ವಹಸ್ತಾಕ್ಷರದಲ್ಲಿ ಬರೆದು ಅಂಚೆ ಮೂಲಕ ಕಳುಹಿಸಬೇಕಾಗಿದೆ.

ಆನ್‌ ಲೈನ್‌ ಉಪನ್ಯಾಸ ಸರಣಿ: ಸಮರ್ಥ ಭಾರತ ಫೇಸ್‌ ಬುಕ್‌ ಖಾತೆಯ ಮೂಲಕ ಜ.12ರಿಂದ ಜ.26ರರವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಇದರಲ್ಲಿ ಶಿಕ್ಷಣ ತಜ್ಞರು, ಚಿಂತಕರು, ಲೇಖಕರು, ಯುವ ಸಾಧಕರು ಉಪನ್ಯಾಸ ನೀಡಲಿದ್ದಾರೆ.

ವಾಕಥಾನ್:‌ ಜ.26ರಂದು ಬೆಳಗ್ಗೆ 7:30ಕ್ಕೆ ಕೋವಿಡ್‌ ನಿಯಮಾವಳಿಗಳನುಸಾರ ಕಾಲ್ನಡಿಗೆ ಕಾರ್ಯಕ್ರಮ ನಡೆಯಲಿದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.

ಸಮರ್ಥ ಭಾರತದ ಈ ಸಾಮಾಜಿಕ ಕಳಕಳಿಯುಳ್ಳ ಅಭಿಯಾನಕ್ಕೆ ಅನೇಕ ಸಂಘ ಸಂಸ್ಥೆಗಳು, ವಿದ್ಯಾಸಂಸ್ಥೆಗಳು, ಡಾ. ಡಿ. ವೀರೇಂದ್ರ ಹೆಗ್ಗಡೆ, ಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ರವಿಶಂಕರ್‌ ಗುರೂಜಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ದನಿಗೂಡಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!