ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಕ್ಸಸ್‌ಫುಲ್ ಮಹಿಳೆಯರು ಫಾಲೋ ಮಾಡುವ ಈ ರೂಲ್ಸ್‌ನನ್ನು ನೀವು ಫಾಲೋ ಮಾಡಿ..

ಎಲ್ಲ ಮಹಿಳೆಯರೂ ಒಂದಲ್ಲಾ ಒಂದು ರೀತಿ ಸಕ್ಸಸ್‌ಫುಲ್ ಆಗಿದ್ದಾರೆ. ಎಲ್ಲರಿಂದ ಗುರುತಿಸಿಕೊಳ್ಳಬೇಕು, ಏನೋ ಒಂದು ಸಾಧನೆ ಮಾಡಬೇಕು ಅನ್ನೋ ಛಲ ಎಲ್ಲರಿಗೂ ಇದ್ದದ್ದೇ. ನಮ್ಮ ದೇಶದಲ್ಲಿ ಈಗಾಗಲೇ ಸಕ್ಸ್‌ಸ್ ಪಡೆದಿರುವ ಎಷ್ಟೋ ಮಂದಿ ಹೆಣ್ಣುಮಕ್ಕಳು ಬೆಳಗ್ಗೆ ಎದ್ದ ತಕ್ಷಣ ಈ ಕೆಲಸಗಳನ್ನು ಮಾಡುತ್ತಾರಂತೆ.. ಯಾವ ಕೆಲಸ ನೋಡಿ..

  • ಮೆಡಿಟೇಟ್: ಎದ್ದ ತಕ್ಷಣ ಒಂದು ಲೋಟ ನೀರು ಕುಡಿದು, ಒಳ್ಳೆ ಗಾಳಿಗೆ ಬಂದು ಮೆಡಿಟೇಟ್ ಮಾಡುತ್ತಾರೆ.
  • ವ್ಯಾಯಾಮ: ವ್ಯಾಯಾಮ ಮಾಡದಿದ್ದರೆ ಏನೋ ಕಳೆದುಕೊಂಡ ಭಾವನೆ ಇವರಿಗೆ ಬರುತ್ತದೆ. ಮೊದಲು ದೇಹ ಆರೋಗ್ಯವಾಗಿದ್ದರೆ, ಆಲೋಚನೆಗಳು ಆರೋಗ್ಯವಾಗಿರುತ್ತದೆ.
  • ಗೋಲ್ಸ್ ಸೆಟ್: ಪ್ರತಿದಿನದ ಗೋಲ್ ಅವರೇ ಸೆಟ್ ಮಾಡುತ್ತಾರೆ. ಅದನ್ನು ಅಂದಿಗೇ ಮುಗಿಸುತ್ತಾರೆ. ಇದರಿಂದಲೇ ಅವರು ಬೇಗ ಸಕ್ಸಸ್ ಹೊಂದುತ್ತಾರೆ.
  • ಹೊಸತು ಬೇಕು: ಒಂದೇ ರೊಟೀನ್‌ಗೆ ಅವರು ಸೆಟ್ ಆಗುತ್ತಾರೆ. ಆದರೆ ಹೊಸತು ಬೇಕು. ಹೊಸ ಕ್ಲಾಸ್‌ಗೆ ಜಾಯಿನ್ ಆಗೋದು ಅಥವಾ ಹೊಸ ಅಭ್ಯಾಸ ಬೆಳೆಸಿಕೊಳ್ಳೋದು. ಇದು ಅವರಿಗೆ ನಾರ್ಮಲ್.
  • ಧನ್ಯವಾದ: ಅವರ ಬಳಿ ಈಗಿರುವ ಎಲ್ಲ ವಸ್ತು, ಮನುಷ್ಯರು, ಸಂಬಂಧಗಳಿಗೆ ಧನ್ಯವಾದ ಅರ್ಪಿಸುತ್ತಾರೆ. ಇನ್ನು ಲಾಸ್ ಆಗಲಿ ಲಾಭ ಆಗಲಿ ನನ್ನ ಬಳಿ ಕಳೆದುಕೊಳ್ಳುವುದು ಏನೂ ಇಲ್ಲ ಎಂದು ನಂಬುತ್ತಾರೆ.
  • ಅಲೋನ್ ಬೆಸ್ಟ್: ಒಬ್ಬಳೇ ಎಂದು ಅವರು ಎಂದಿಗೂ ಬೇಸರ ಪಡುವುದಿಲ್ಲ. ಅವರಿಗೆ ಅಲೋನ್ ಟೈಮ್ ತುಂಬಾನೇ ಮುಖ್ಯ. ಅದರಲ್ಲಿ ಅವರ ಆಲೋಚನೆಗಳಿಗೆ ರೆಕ್ಕೆ ಸಿಗುತ್ತದೆ.
  • ಆರೋಗ್ಯಕರ ಆಹಾರ: ಅವರು ಆರೋಗ್ಯಕರ ಆಹಾರ ಸೇವಿಸುತ್ತಾರೆ. ದಿನವಿಡೀ ಎನರ್ಜಿ ನೀಡುವ ಆಹಾರ ಸೇವಿಸಿ ಆಕ್ಟೀವ್ ಆಗುತ್ತಾರೆ. ಆರೋಗ್ಯ ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿಯೇ ಇರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss