ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ನಟಿ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಮಕ್ಕಳ ಒಂದಲ್ಲಾ ಒಂದು ಪೋಸ್ಟ್ ಗಳನ್ನು ಹಾಕುತ್ತಲೇ ಇರುತ್ತಾರೆ. ಇದೀಗ ಪುತ್ರ ಯಥರ್ವನ ವೀಡಿಯೋ ಶೇರ್ ಮಾಡಿದ್ದು, ಮಗುವಿನ ನಗುವಿಗೆ ನೆಟ್ಟುಗರು ಫಿದಾ ಆಗಿದ್ದಾರೆ.
ಏನಿದೆ ವಿಡಿಯೋದಲ್ಲಿ?: ಇದರಲ್ಲಿ ಯಥರ್ವ ಗೆ ರಾಧಿಕಾ ಪಂಡಿತ್ ಉಗುರು ಕಟ್ ಮಾಡುತ್ತಿದ್ದು, ಅದಕ್ಕೆ ಮಗು ಮುದ್ದಾಗಿ ನಗುತ್ತಿರುವ ಧ್ವನಿ ರೆಕಾರ್ಡ್ ಆಗಿದೆ. ಇದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತವಾಗಿದೆ.
ಇತ್ತೀಚೆಗಷ್ಟೆ ಮಗಳು ಐರಾಳ ವಿಡಿಯೋವನ್ನು ಶೇರ್ ಮಾಡಿದ್ದ ರಾಧಿಕಾ, ಅದರಲ್ಲಿ ಐರಾ ಪುಟ್ಟ ಹೆಜ್ಜೆ ಇಡುತ್ತಿದ್ದ ದಿನಗಳಲ್ಲಿ, ಆಕೆಯ ನೆರಳನ್ನು ಹೊಸ ಫ್ರೆಂಡ್ ಎಂದು ತಿಳಿದು ಹಾಯ್! ಎಂದಿದರುವ ಫ್ಲಾಶ್ ಬ್ಯಾಕ್ ವಿಡಿಯೋವನ್ನು ಹಂಚಿಕೊಂಡಿದ್ದರು.
https://www.instagram.com/p/CQBGOGvg6k6/?utm_source=ig_web_copy_link