ಚೆಕ್‌ಬೌನ್ಸ್ ಕೇಸ್: ಶಾಸಕ ಕೆ.ವೈ. ನಂಜೇಗೌಡಗೆ 49.65 ಲಕ್ಷ ರೂ. ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೆಕ್‌ಬೌನ್ಸ್ ಪ್ರಕರಣದಲ್ಲಿ ಶಾಸಕ ಕೆ.ವೈ. ನಂಜೇಗೌಡ ಅವರಿಗೆ 49.65 ಲಕ್ಷ ರೂ. ದಂಡ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.

ರಾಮಚಂದ್ರ ಎನ್ನುವವರಿಗೆ 40 ಲಕ್ಷ ರೂ. ಸಾಲ ಮರುಪಾವತಿಗೆ ಚೆಕ್ ನೀಡಿದ್ದು, ಅದು ಬೌನ್ಸ್ ಆಗಿದೆ. ಚೆಕ್‌ಬೌನ್ಸ್ ಕೇಸ್‌ನಲ್ಲಿ ನಂಜೇಗೌಡ ಅವರಿಗೆ 49.65 ಲಕ್ಷ ರೂ. ದಂಡ ವಿಧಿಸಲಾಗಿದೆ.

ದಂಡ ಪಾವತಿಸಲು ಆರು ತಿಂಗಳ ಕಾಲಾವಕಾಶ ಇದ್ದು, ಪಾವತಿಸದಿದ್ದರೆ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!