Wednesday, August 17, 2022

Latest Posts

ಪ್ರಧಾನಿ ಮೋದಿ ಅವರಿಂದ ‘ಚೀಯರ್ 4 ಇಂಡಿಯಾ’ ಅಭಿಯಾನ: ಒಲಂಪಿಕ್ಸ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದ ಕ್ರಿಕೆಟಿಗರು!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಟೋಕಿಯೊ ಒಲಿಂಪಿಕ್ಸ್‌ಗೆ ಭಾರತೀಯ ಕ್ರೀಡಾಪಟುಗಳು ಕೆಲವೇ ದಿನಗಳಲ್ಲಿ ತೆರಳಲಿದ್ದು, ಹೀಗಾಗಿ ಇಡೀ ದೇಶವೇ ಆಟಗಾರರನ್ನು ಹುರಿದುಂಬಿಸುತ್ತಿದೆ.
ಪಿಎಂ ನರೇಂದ್ರ ಮೋದಿ ಅವರು ಕೂಡ ಆಟಗಾರರ ಉತ್ಸಾಹವನ್ನು ಹೆಚ್ಚಿಸಲು ‘ಚೀಯರ್ 4 ಇಂಡಿಯಾ’ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದು, ಭಾರತೀಯ ಕ್ರಿಕೆಟಿಗರೂ ಈ ಅಭಿಯಾನಕ್ಕೆ ಕೈಜೋಡಿಸಿದ್ದು ಆಟಗಾರರಿಗೆ ಹಾರೈಸಿದರು.

ಬಿಸಿಸಿಐ ವಿಶೇಷ ವಿಡಿಯೋ ಹಂಚಿಕೊಳ್ಳುವ ಮೂಲಕ ಆಟಗಾರರನ್ನು ಅಭಿನಂದಿಸಿದೆ. ಟೋಕಿಯೊ ಒಲಿಂಪಿಕ್ಸ್‌ಗಾಗಿ ಭಾರತದ ಕ್ರೀಡಾಪಟುಗಳಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವಲ್ಲಿ ಭಾರತದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಬಿಸಿಸಿಐ ಹೆಮ್ಮೆಯಿಂದ ತೊಡಗಿಸಿಕೊಂಡಿದೆ ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ. ಕ್ರೀಡಾಪಟುಗಳು ಕಷ್ಟಪಟ್ಟು ಕೆಲಸ ಮಾಡಿದ್ದಾರೆ ಮತ್ತು ಹೋಗಲು ಉತ್ಸುಕರಾಗಿದ್ದಾರೆ. ನಾವು ಅವರನ್ನು ಒಟ್ಟಿಗೆ ಹುರಿದುಂಬಿಸೋಣ ಎಂದು ಬರದುಕೊಂಡಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಶನಿವಾರ ಹಂಚಿಕೊಂಡಿರುವ ವಿಡಿಯೋದಲ್ಲಿ, ಮಿಥಾಲಿ, ರೋಹಿತ್, ವಿರಾಟ್ ಕೊಹ್ಲಿ, ಜೆಮಿಮಾ ರೊಡ್ರಿಗಸ್, ಅಜಿಂಕ್ಯ ರಹಾನೆ, ಹಾರ್ಲೀನ್ ಡಿಯೋಲ್ ಅವರಂತಹ ಆಟಗಾರರು ಭಾರತಕ್ಕೆ ಮೆರಗು ನೀಡಿ ಎಂದು ಹೇಳಿಕೊಂಡಿದ್ದಾರೆ.

ಜುಲೈ 23 ರಿಂದ ಒಲಿಂಪಿಕ್ಸ್‌ ಪ್ರಾರಂಭವಾಗಲಿದ್ದು,ಭಾರತದ 100 ಕ್ಕೂ ಹೆಚ್ಚು ಕ್ರೀಡಾಪಟುಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಹಾಕಿ ನಾಯಕ ಮನ್‌ಪ್ರೀತ್ ಸಿಂಗ್ ಮತ್ತು ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಾಕ್ಸರ್ ಎಂಸಿ ಮೇರಿ ಕೋಮ್ ಭಾರತದ ಧ್ವಜ ಧಾರಕರಾಗಲಿದ್ದಾರೆ. ಆಗಸ್ಟ್ 8 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅಗ್ರ ಕುಸ್ತಿಪಟು ಭಜರಂಗ್ ಪುನಿಯಾ ಅವರನ್ನು ದೇಶದ ಧ್ವಜ ಧಾರಕರನ್ನಾಗಿ ಮಾಡಲಾಗಿದೆ.

https://twitter.com/BCCI/status/1413825310085292039/video/1

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!