VIRAL VIDEO| ಚಿರತೆಗೆ ಮುಳ್ಳುಹಂದಿಗಳ ಠಕ್ಕರ್:‌ Z+ ಕ್ಯಾಟಗರಿ ಭದ್ರತೆ ಕಂಡು ಬಾಲಮುದುರಿ ಓಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಕ್ಕಳ ಬಗೆಗಿನ ಪ್ರೀತಿ ಕೇವಲ ಮನುಷ್ಯರಿಗಷ್ಟೇ ಅಲ್ಲ..ಪ್ರಾಣಿಗಳಿಗೂ ತುಸು ಹೆಚ್ಚಾಗೇ ಇರುತ್ತದೆ. ತಮ್ಮ ಮರಿಗಳಿಗೆ ಅನಾಹುತ ಉಂಟಾದಲ್ಲಿ ಮಮ್ಮಲ ಮರುಗುತ್ತವೆ. ಯಾವುದೇ ಅಪಾಯ ಬಾರದಂತೆ ಬಹಳ ಎಚ್ಚರಿಕೆ ವಹಿಸುತ್ತವೆ. ಇದೀಗ ವೈರಲ್‌ ಆಗಿರುವ ವಿಡಿಯೋದಲ್ಲಿ ಎರಡು ಮುಳ್ಳುಹಂದಿಗಳು ತಮ್ಮ ಮರಿಯನ್ನು ರಕ್ಷಿಸಲು ಚಿರತೆಯ ವಿರುದ್ಧ ಹೋರಾಡಿದ ರೀತಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಧು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ವೀಡಿಯೊ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ. ತಮ್ಮ ಮಗುವನ್ನು ರಕ್ಷಿಸಲು ಮುಳ್ಳುಹಂದಿಗಳು Z+ ಕೆಟಗರಿ ರಕ್ಷಣೆಯನ್ನು ಒದಗಿಸಿವೆ ಎಂದು ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ. ಚಿರತೆ ಯಾವ ಕಡೆಯಿಂದ ದಾಳಿ ಮಾಡಲು ಯತ್ನಿಸಿದರೂ ದೊಡ್ಡ ಮುಳ್ಳುಹಂದಿಗಳು ಹೋಗಿ ತಡೆದಿವೆ.

ಚಿರತೆಯ ಜೊತೆ ಹೋರಾಡಿದ ರೀತಿ ಅದ್ಭುತವಾಗಿದೆ. ಮುಳ್ಳುಹಂದಿಗಳು ಮುಳ್ಳುಗಳಿಂದ ಪರಭಕ್ಷಕಗಳ ಮೇಲೆ ದಾಳಿ ಮಾಡುವ ಮೂಲಕ ತಮ್ಮ ಮರಿಗಳನ್ನು ರಕ್ಷಿಸುತ್ತವೆ. ಇಲ್ಲೂ ಅದೇ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!