ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ದಕ್ಷಿಣ ಚೀನಾದಲ್ಲಿ ಸೂಪ್ ಮಾಡಲು ತಂದಿದ್ದ ಹಾವಿನಿಂದಲೇ ಬಾಣಸಿಗ ಮೃತಪಟ್ಟಿದ್ದಾನೆ.
ವಿಚಿತ್ರವೇನೆಂದರೆ ಹಾವಿನ ತಲೆಯನ್ನು ಕತ್ತರಿಸಿ, 20 ನಿಮಿಷದ ನಂತರ ಡಸ್ಟ್ಬಿನ್ ಹಾಕಲು ಹೋದಾಗ ಹಾವು ಬಾಣಸಿಗನನ್ನು ಕಚ್ಚಿ ಕೊಂದಿದೆ.
ಗುವಾಂಗ್ಡಾಂಗ್ ಪ್ರಾಂತ್ಯದ ಬಾಣಸಿಗ ಚೆಂಗ್ ಪೆಂಗ್ ಹಾವು ಕಚ್ಚಿಸಿಕೊಂಡು ಮೃತಪಟ್ಟ ಬಾಣಸಿಗ. ಚೀನಾದಲ್ಲಿ ವಿಷಕಾರಿ ಹಾವಿನ ಮಾಂಸದ ಸೂಪ್ಗೆ ಬೇಡಿಕೆ ಹೆಚ್ಚಿದ್ದು, ಅದೇ ಸೂಪ್ ತಯಾರಿಯಲ್ಲಿದ್ದ ಬಾಣಸಿಗನ ಪ್ರಾಣವೇ ಹೋಗಿದೆ.
ನಾಗರಹಾವಿನ ತಲೆ ಕತ್ತರಿಸಿ ಪಕ್ಕಕ್ಕಿಟ್ಟಿದ್ದಾನೆ. ನಂತರ ಸೂಪ್ ಪ್ರಿಪರೇಶನ್ನಲ್ಲಿ ತೊಡಗಿದ್ದಾನೆ. ಇದೆಲ್ಲ ಆದ 20 ನಿಮಿಷದ ನಂತರ ಸೂಪ್ ತಯಾರಾಗಿದೆ. ಅಡುಗೆ ಮನೆ ಕ್ಲೀನ್ ಮಾಡುವ ವೇಳೆ ಹಾವಿನ ತಲೆಯನ್ನು ಡಸ್ಟ್ಬಿನ್ಗೆ ಹಾಕಲು ಹೋದಾಗ ಹಾವು ಕಚ್ಚಿದೆ. ತಕ್ಷಣ ಆತ ಕೂಗಿದ್ದಾನೆ. ವೈದ್ಯರು ಬರುವ ಮುನ್ನವೇ ಬಾಣಸಿಗ ಮೃತಪಟ್ಟಿದ್ದಾನೆ.