ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿತ್ಯ ತಿನ್ನುವ ಫಾಸ್ಟ್ಫುಡ್ಗಳು ಆರೋಗ್ಯಕ್ಕೆ ಹಾನಿಕಾರಕ. ಆದರೆ ಇದೀಗ ಈ ಆಹಾರಗಳಲ್ಲಿ ಡಿಟರ್ಜೆಂಟ್ ಅಂಶವೂ ಮಿಶ್ರಣವಾಗಿರುವುದು ಬೆಳಕಿಗೆ ಬಂದಿದೆ.
ಈ ಡಿಟರ್ಜೆಂಟ್ ಅಂಶದಿಂದ ಉಸಿರಾಟ ಹಾಗೂ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ಆರಂಭವಾಗುತ್ತವೆ.
ವಾಷಿಂಗ್ಟನ್, ಬೋಸ್ಟನ್ ಹಾಗೂ ಹಾರ್ವಡ್ ಯೂನಿವರ್ಸಿಟಿ ಮತ್ತು ಸೌತ್ವೆಸ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್ ಅಧ್ಯಯನ ನಡೆಸಿದ್ದು, ಪ್ಲಾಸ್ಟಿಕ್ ಮೃದು ಮಾಡಲು ಬಳಸುವ ಥಾಲೆಟ್ಗಳು ಮ್ಯಾಕ್ಡೊನಾಲ್ಡ್,ಪಿಜ್ಜಾ ಹಟ್ ಹಾಗೂ ಬರ್ಗರ್ ಕಿಂಗ್ನ ಟ್ಯಾಕೋಬೆಲ್ ಆಹಾರದಲ್ಲಿ ಕಂಡುಬಂದಿದೆ.
ಈ ಕಂಪನಿಗಳ ಫ್ರೆಂಚ್ ಫ್ರೈಸ್, ಚಿಕನ್ ನಗೆಟ್ಸ್ ಹಾಗೂ ಚೀಸ್ ಪಿಜ್ಜಾ ಸೇರಿದಂತೆ ಸುಮಾರು 64 ಬಗೆಯ ಆಹಾರಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಶೇ. 80 ರಷ್ಟು ಆಹಾರದಲ್ಲಿ ರಾಸಾಯನಿಕ ಪತ್ತೆಯಾಗಿದೆ.
ಕಾಸ್ಮೆಟಿಕ್ಸ್, ವಿನೈಲ್ ಫ್ಲೋರ್, ಡಿಟರ್ಜೆಂಟ್, ಗ್ಲೋವ್ಸ್ ಹಾಗೂ ವೈರ್ಸ್ಗಳ ತಯಾರಿಕೆಯಲ್ಲಿ ಥಾಲೆಟ್ ರಾಸಾಯನಿಕ ಬಳಕೆ ಮಾಡಲಾಗುತ್ತದೆ. ಇದು ಪ್ಲಾಸ್ಟಿಕ್ನ್ನು ಮೃದು ಮಾಡುತ್ತದೆ. ಈ ರಾಸಾಯನಿಕ ಸೇವನೆಯಿಂದ ಮಕ್ಕಳಲ್ಲಿ ಅಸ್ತಮಾ, ಮೆದುಳಿದ ದುರ್ಬಲತೆ ಹಾಗೂ ಸಂತಾನೋತ್ಪತಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ. ಈ ಅಧ್ಯಯನದ ಬಗ್ಗೆ ಎಫ್ಡಿಎ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಅಧ್ಯಯನ ನಡೆಸುವುದಾಗಿ ತಿಳಿಸಿದೆ.