spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಫೈನಲ್​​ಗೆ ಲಗ್ಗೆ ಇಟ್ಟ ಚೆನ್ನೈ: ಧೋನಿ ಆಟ ಕಂಡು ಕಣ್ಣೀರಿಟ್ಟ ಪತ್ನಿ ಸಾಕ್ಷಿ!

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಐಪಿಎಲ್ ​​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಚೆನ್ನೈ ಸೂಪರ್​ ಕಿಂಗ್ಸ್​​ 9ನೇ ಬಾರಿಗೆ ಫೈನಲ್​​ಗೆ ಪ್ರವೇಶ ಪಡೆದುಕೊಂಡಿದೆ.
ನಿನ್ನೆ ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡಿದ ಧೋನಿ, ಮ್ಯಾಚ್​ ವಿನ್ನರ್​ ಎಂದು ಸಾಬೀತುಪಡಿಸುವುದರ ಜೊತೆಗೆ ತಂಡವನ್ನ ಫೈನಲ್​ಗೆ ಕರೆದುಕೊಂಡು ಹೋದರು.
ಇತ್ತ ಧೋನಿ ಬ್ಯಾಟಿಂಗ್ ಮಾಡ್ತಿದ್ದ ವೇಳೆ ಗ್ಯಾಲರಿಯಲ್ಲಿ ಕುಳಿತುಕೊಂಡು ಪಂದ್ಯ ವೀಕ್ಷಣೆ ಮಾಡ್ತಿದ್ದ ಧೋನಿ ಪತ್ನಿಸಾಕ್ಷಿ, ಬೌಂಡರಿ ಸಿಡಿಸಿ, ತಂಡವನ್ನ ಗೆಲ್ಲಿಸುತ್ತಿದ್ದಂತೆ ಮಗಳನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ.
ಸಿಎಸ್​ಕೆ ಗೆಲುವು ಸಾಧಿಸಲು ಕೊನೆಯ 6 ಎಸೆತಗಳಲ್ಲಿ 13 ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಒಂದು ಸಿಕ್ಸರ್,​​​ 3 ಬೌಂಡರಿ ಸಿಡಿಸಿ ಧೋನಿ ಮಿಂಚಿದರು. ಗಂಡನ ಅದ್ಭುತ ಪ್ರದರ್ಶನಕ್ಕೆ ಫಿದಾ ಆಗಿರುವ ಸಾಕ್ಷಿ ಸಂತೋಷದಿಂದಲೇ ಮಗಳು ಝಿವಾ ತಬ್ಬಿಕೊಂಡು ಸಂಭ್ರಮಿಸಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.
ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ನೀಡಿದ್ದ 172ರನ್​ಗಳ ಗುರಿ ಬೆನ್ನಟ್ಟಿದ್ದ ಸಿಎಸ್​ಕೆ 19. 4ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ ಫೈನಲ್​ಗೆ ಲಗ್ಗೆ ಹಾಕಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss