IPL 2023 | ಫೈನಲ್ ಟಿಕೆಟ್‌ಗಾಗಿ ಸೆಣೆಸಾಡಲಿದೆ ಚೆನ್ನೈ VS ಗುಜರಾತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

16 ನೇ ಆವೃತ್ತಿಯ ಐಪಿಎಲ್‌ನ ನಾಕೌಟ್ ಪಂದ್ಯಗಳು ಇಂದಿನಿಂದ ಆರಂಭವಾಗಲಿದೆ.

ನಾಲ್ಕು ಬಲಿಷ್ಠ ತಂಡಗಳು ಪ್ಲೇ ಆಫ್ ತಲುಪಿದ್ದು, ಇಂದು ಮೊದಲ ಪಂದ್ಯ ಚೆನ್ನೈನ ಚಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ನಾಲ್ಕು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ಫೈನಲ್ ಟಿಕೆಟ್‌ಗಾಗಿ ಕಾದಾಡಲಿದ್ದಾರೆ.

ಇಂದು ಗೆಲ್ಲುವ ತಂಡ ಸೀದ ಫೈನಲ್ ತಲುಪಲಿದೆ. ಸೋತ ತಂಡ ಕ್ವಾಲಿಫೈಯರ್‌ಗಾಗಿ ಮತ್ತೆ ಇನ್ನೊಂದು ಪಂದ್ಯ ಆಡಲಿದೆ. ಎರಡೂ ತಂಡಗಳು ಸಾಕಷ್ಟು ತಯಾರಿ ನಡೆಸಿದ್ದು, ಇಂದಿನ ಪಂದ್ಯ ರೋಚಕವಾಗಿರುವುದಂತೂ ಖಂಡಿತ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!