ಚೆರ್ವತ್ತೂರು ಘಟನೆ ಇಂಪ್ಯಾಕ್ಟ್: ಶವರ್ಮಾ ಮಳಿಗಳ ಮೇಲೆ ಮಿಂಚಿನ ದಾಳಿಗೆ ಸಿದ್ಧತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಸರಗೋಡು ಜಿಲ್ಲೆಯ ಚೆರ್ವತ್ತೂರಿನಲ್ಲಿ ವಿಷಪೂರಿತ ಶವರ್ಮಾ (ಮಾಂಸ ಮಿಶ್ರಿತ ಖಾದ್ಯ) ಸೇವಿಸಿ ಭಾನುವಾರ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ ಬೆನ್ನಿಗೇ ಕೇರಳ ಸರ್ಕಾರ ಅಲರ್ಟ್ ಆಗಿದ್ದು, ರಾಜ್ಯದಾದ್ಯಂತ ಷವರ್ಮಾ ಮಳಿಗೆಗಳ ತಪಾಸಣೆಗೆ ಮುಂದಾಗಿದೆ.
ಈ ಬಗ್ಗೆ ಆಹಾರ ಸುರಕ್ಷತಾ ಆಯುಕ್ತ ವಿ.ಆರ್. ವಿನೋದ್ ಸೂಚನೆ ನೀಡಿದ್ದು, ಶವರ್ಮಾ ಮಳಿಗೆಗಳ ಸ್ವಚ್ಛತೆ, ಬಳಸುವ ಮಾಂಸ, ಮಾಯೊನೋಸ್ ತಯಾರಿಕೆ, ತರಕಾರಿಗಳ ಆಯ್ಕೆ ಪರಿಶೀಲಿಸಲು ಉದ್ದೇಶಿಸಲಾಗಿದೆ ಎಂದಿದ್ದಾರೆ.  ಇದೇ ಸಂದರ್ಭ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲು ಪ್ರಸ್ತಾಪಿಸಲಾಗಿದೆ.
ಚೆರುವತ್ತೂರು ಘಟನೆಗೆ ಸಂಬಂಧಿಸಿ ಅಂಗಡಿಯ ವ್ಯವಸ್ಥಾಪಕ ಪಾಲುದಾರ, ಶವರ್ಮಾ ತಯಾರಿಸಿದ ನೇಪಾಳಿ ಪ್ರಜೆಯನ್ನು ಈಗಾಗಲೇ ಬಂಧಿಸಲಾಗಿದ್ದು, ವಿದೇಶದಲ್ಲಿದ್ದಾರೆ ಎನ್ನಲಾದ ಅಂಗಡಿಯ ಮಾಲಕರನ್ನೂ  ಕರೆಸಲು ಪೊಲೀಸರು ನಿರ್ಧರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!