Wednesday, August 17, 2022

Latest Posts

ತಮ್ಮನ ಅಗಲಿಕೆಯ ನೋವಿನಲ್ಲಿರುವಾಗಲೇ ತಂದೆಯನ್ನು ಕಳೆದುಕೊಂಡ ಚೇತನ್ ಸಕಾರಿಯಾ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ತಮ್ಮನ ಅಗಲಿಕೆಯ ನೋವಿನಿಂದ ಹೊರಬರುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಚೇತನ್ ಸಕಾರಿಯಾ ಗೆ ಇದೀಗ ಮರೆಯಲಾಗದ ಮತ್ತೊಂದು ದುಃಖ ಜೀವನದಲ್ಲಿ ಬಂದಿದೆ.
ಇಂದು ಕೊರೋನಾ ಸೋಂಕಿಗೆ ಸಕಾರಿಯಾ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಈ ದುಃಖದ ವಿಚಾರವನ್ನು ದೃಢಪಡಿಸಿದ್ದು, ‘ ಇದು ದುರದೃಷ್ಟಕರವಾಗಿದೆ, ಈ ಸಂದರ್ಭದಲ್ಲಿ ಸಕಾರಿಯಾ ಕುಟುಂಬದ ಜೊತೆ ನಮ್ಮ ಪ್ರಾರ್ಥನೆ ಇರಲಿದೆ’ಎಂದು ರಾಯಲ್ಸ್ ಮೂಲ ತಿಳಿಸಿದೆ.
ಐಪಿಎಲ್ ಕೋವಿಡ್​ 19 ಕಾರಣ ರದ್ದಾದ ಬಳಿಕ ಮನೆಗೆ ಚೇತನ್ ಸಕಾರಿಯಾ ತೆರಳಿದ ವೇಳೆ, ಅವರ ತಂದೆಗೆ ಕೊರೋನಾ ತಗುಲಿದ್ದು, ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಹೋರಾಟವನ್ನು ನಡೆಸಿದರು.
ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಕೂಡ ಚೇತನ್ ಸಕಾರಿಯಾ ಅವರಿಗೆ ಸಂಭಾವನೆಯ ಒಂದು ಭಾಗವನ್ನು ಸಹ ನೀಡಿತ್ತು. ಆದರೆ ವಿಧಿಯಾಟ ಸಕಾರಿಯಾ ತಂದೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ಈ ವರ್ಷ ಮೊಟಕುಗೊಂಡ ಐಪಿಎಲ್​ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದ ಸಕಾರಿಯಾ ಸಯ್ಯದ್​ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುವ ವೇಳೆ ತಮ್ಮ ಸಹೋದರನನ್ನು ಕಳೆದುಕೊಂಡಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!